ಪ್ರಮುಖ ಸುದ್ದಿ
‘ಆಪರೇಷನ್ ಕಮಲ ಮಾಡ್ತಾರೆ ಅನ್ನೋರು ಹುಚ್ಚರು – ಶಾಸಕ ಶಿವಲಿಂಗೇಗೌಡ
ಆಪರೇಷನ್ ಕಮಲ ಮಾಡಿದರೆ, ಜನ ಹೊಡಿತಾರೆ..?
ಆಪರೇಷನ್ ಕಮಲ ಮಾಡ್ತಾರೆ ಅನ್ನೋರು ಹುಚ್ಚರು – ಶಾಸಕ ಶಿವಲಿಂಗೇಗೌಡ
ಆಪರೇಷನ್ ಕಮಲ ಸಾಧ್ಯವಿಲ್ಲ 50 ಶಾಸಕರಿಗೆ ಆಫರ್ ಅದ್ಹೇಗೆ.? ಜನ ಹೊಡಿತಾರೆ..?
ವಿವಿ ಡೆಸ್ಕ್ಃ ‘ಆಪರೇಷನ್ ಕಮಲ’ ನಡಿತಿದೆ ಎನ್ನೋದು ಸುಳ್ಳು. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಅರಸಿಕೆರಿ ಶಾಸಕ ಶಿವಲಿಂಗೇಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಕಮಲ ಅನ್ನೋದೆಲ್ಲ ಸುಳ್ಳು, 50 ಶಾಸಕರನ್ನು ಆಪರೇಷನ್ ಮೂಲಕ ಕರೆದೊಯ್ಯುವದು ಅಸಾಧ್ಯ. ಯಾವ ಆಫರ್ ಇಲ್ಲ ಎನಿಲ್ಲ. ಸೋತವರಿಗೆ ಮಾಡಲು ಬೇರೆ ಕೆಲಸವಿಲ್ಲ. ಸುಮ್ಮನೆ ಹೇಳಿಕೆ ನೀಡಿ ಪ್ರಚಾರಗಿಟ್ಟಿಸಿ ಕೊಳ್ಳುತ್ತಿದ್ದಾರಷ್ಟೆ ಎಂದು ಬಿಜೆಪಿಯರನ್ನು ಜರಿದ, ಅವರು ಈ ಬಾರಿ ಆಪರೇಷನ್ ಮಾಡಿದರೆ ಜನ ಹೊಡಿತಾರೆ, ಯಾವದ್ಯಾವದರಿಂದ ಹೊಡಿತಾರೋ ಅವರಿಗೆ ಗೊತ್ತು ಎಂದು ಕುಟುಕಿದರು.