ಪ್ರಮುಖ ಸುದ್ದಿ
ಗಾಂಧಿವಾದಿ ದೊರೆಸ್ವಾಮಿ ಇನ್ನಿಲ್ಲ..
ಸ್ವಾತಂತ್ರ್ಯ ಸೇನಾನಿ H.S.ದೊರೆಸ್ವಾಮಿ ಇನ್ನಿಲ್ಲ
ಬೆಂಗಳೂರಃ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (103) ಹೃದಯಾಘಾತದಿಂದ ನಿಧನರಾದರು. ಕಳೆದ 15 ದಿನಗಳಿಂದಷ್ಟೆ ಕೊರೊನಾ ಮಹಾಮಾರಿಯನ್ನು ಸೋಲಿಸಿ ಗುಣಮುಖರಾಗಿ ಹೊರ ಬಂದಿದ್ದರು. ಮತ್ತೆ ಉಸಿರಾಟ ತೊಂದರೆಯಿಂದಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ಕಣ್ಮರೆಯಾದರು.
ಅವರು 1918 ಏಪ್ರಿಲ್ ನಲ್ಲಿ ಕನಕಪುರದ ಹಾರೋಹಳ್ಳಿಯಲ್ಲಿ ಜನ್ಮಿಸಿದ್ದರು. ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟ ಸಂದರ್ಭ 14 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರು.
ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಪುಸ್ತಕ ಮಳಿಗೆ ಮತ್ತು ಪ್ರಕಾಶನ ಡಿಪೋವನ್ನು ಸ್ಥಾಪಿಸಿದ್ದರು. ಇಳೆ ವಯಸ್ಸಿನಲ್ಲೂ ಅವರು ರಾಜಕೀಯ ಹತ್ತು ಹಲವಾರು ಮಜಲುಗಳ ಬಗ್ಗೆ ಮಾತನಾಡುತ್ತಿದ್ದರು.