ಪ್ರಮುಖ ಸುದ್ದಿ
ನಟ ಪುನೀತ್ ರಾಜಕುಮಾರಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ

ನಟ ಪುನೀತ್ ರಾಜಕುಮಾರ ಹೃದಯಾಘಾತ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿತಿ ಗಂಭೀರ
ಬೆಂಗಳೂರಃ ನಟ ಪುನಿತ್‌ರಾಜಕುಮಾರ ಬೆಳಗ್ಗೆ ಜಿಮ್ ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದ್ದು, ಕೂಡಲೇ ಆಸ್ಪತ್ರೆಗೆ ತೆರಳುವ ಮೂಲಕ ಚಿಕಿತ್ಸೆಗೆ ಒಳಗಾಗಿದ್ದಾರೆ.
ವೈದ್ಯರು ಸೂಕ್ಷ್ಮ ತಪಾಸಣೆ ನಡೆಸಿದ್ದು, ಹೃದಯ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಕುರಿತು ತೀವ್ರ ತಪಾಸಣೆ ನಡೆಸಿರುವ ವೈದ್ಯರ ತಂಡ ಸದ್ಯ ಪುನೀತ್ ರನ್ನು ಐಸಿಯುನಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳಲ್ಲಿ ಆತಂಕ ಎದುರಾಗಿದ್ದು, ಚಿತ್ರ ನಟರು, ಸಂಬಂಧಿಕರು ಅಸ್ಪತ್ರೆಯಲ್ಲಿ ಜೊತೆಗಿದ್ದಾರೆ ಎನ್ನಲಾಗಿದೆ.
ನಟ ಪುನೀತರ ದೇಹ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ವೈದ್ಯರು ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ. ಇದರಿಂದಾಗಿ ಇನ್ನಷ್ಟು ಆತಂಕ ಮನೆ ಮಾಡಿದೆ ಎಂದು ಅಭಿಮಾನಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.