ಸಚಿವರಿಗೆ ನಿಂದನೆಃ ರೈತ ಮುಖಂಡನಿಗೆ ಜಾಮೀನು
ಸಚಿವರಿಗೆ ನಿಂದನೆಃ ರೈತ ಮುಖಂಡನಿಗೆ ಜಾಮೀನು
yadgiri, ಶಹಾಪುರ: ಆರ್.ಶಂಕರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆಂದು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ರೈತ ಮುಖಂಡ ಬಸಪ್ಪ ಭಂಗಿ ಅವರಿಗೆ ಸೋಮವಾರ ಶಹಾಪುರ ಜೆಎಂಎಫ್ ನ್ಯಾಯಾಲಯ ಜಾಮೀನು ನೀಡಿದೆ.
ಸ್ವಪ್ರೇರಣೆಯಾಗಿ ಅವರು ನ್ಯಾಯಾಲಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು. ನ್ಯಾಯಾಲಯವು 20 ಸಾವಿರ ವಯಕ್ತಿಕ ಬಾಂಡ್ ಮುಚ್ಚಳಿಕೆ ಬರೆದುಕೊಡಲು ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ ಆದೇಶ ನೀಡಿದರು ಎಂದು ಆರೋಪಿ ಪರ ವಕೀಲ ಟಿ.ನಾಗೇಂದ್ರ ತಿಳಿಸಿದರು.
ವಿವರ: ಕೃಷ್ಣಾ ನದಿ ಪ್ರವಾಹದಿಂದ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ಮುಳುಗಡೆ ಆಗಿರುವುದನ್ನು ವೀಕ್ಷಿಸಲು ಆರ್.ಶಂಕರ್ ಜುಲೈ 24ರಂದು ಗ್ರಾಮಕ್ಕೆ ಬಂದಿದ್ದರು. ಆಗ ರೈತ ಮುಖಂಡ ಬಸಪ್ಪ ಬಂಗಿ “ಬೆಳೆ ಪರಿಹಾರ ಸಿಕ್ಕಿಲ್ಲ’ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆನಂತರ ಪೊಲೀಸರು ಪರಿಶೀಲಿಸಿದಾಗ ಬಸಪ್ಪ ಬಂಗಿ ಅವರಿಗೆ ಬೆಳೆ ಪರಿಹಾರ ಸಿಕ್ಕಿರುವುದು ತಿಳಿದು ಬಂದಿತು.
ಪರಿಹಾರ ಸಿಕ್ಕಿದ್ದರೂ ಅವಾಚ್ಯ ಶಬ್ದಗಳನ್ನು ಬಳಿಸಿ ಬೈದಾಡಿದ್ದಾರೆ ಎಂದು ಆರೋಪಿಸಿ ಅಂದು ಬಂದೋಬಸ್ತು ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಶಹಾಪುರ ಠಾಣೆಯ ಪಿಎಸ್‍ಐ ಶಾಮಸುಂದರ ನಾಯಕ ದೂರು ದಾಖಲಿಸಿದ್ದರು.
ಪ್ರಕರಣ ಕೈ ಬಿಡಿ: ಸ್ಥಳೀಯ ಮುಖಂಡ ಬಸಪ್ಪ ಬಂಗಿ ಅವರು ಬೆಳೆ ಪರಿಹಾರ ಸಿಕ್ಕಲ್ಲ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದನ್ನೆ ಸವಾಲು ಆಗಿ ಸ್ವೀಕರಿಸಿ ದೂರು ದಾಖಲಿಸಿರುವುದು ಸರ್ಕಾರದ ಉತ್ತಮ ನಡೆಯಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ರೈತ ಮುಖಂಡನ ಮೇಲೆ ಪ್ರಕರಣವನ್ನು ಕೈ ಬಿಡಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
————-