ರಮೇಶ ಜಾರಕಿಹೊಳಿಗೆ ಖಡಕ್ ಎಚ್ಚರಿಕೆ
ರಮೇಶ ಜಾರಕಿಹೊಳಿಗೆ ಖಡಕ್ ಎಚ್ಚರಿಕ
ಬೆಂಗಳೂರಃ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಡಿಸಿಎಂ ಪರಮೇಶ್ವರ ರಮೆಶ ಜಾರಕಿಹೊಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರಂತೆ ಇದೀಗ ತಿಳಿದು ಬಂದಿದೆ.
ಡಿಸಿಎಂ ಪರಮೇಶ್ವರ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಡಿ ಮಾಡಿ ಕೆಲ ಹೊತ್ತು ಚರ್ಚಿಸಿ ತಮ್ಮ ಪಕ್ಷದ ಅಸಮಾಧಾನಿತ ಮುಖಂಡರಿಗೆ ವಾರ್ನಿಂಗ್ ನೀಡಿರುವ ಕುರಿತು ಮಾಧ್ಯಮಗಳ ಗಮನಕ್ಕೆ ಬಂದಿದೆ.
ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಲ್ಲಿ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗುತ್ತೀರಿ.
ಈ ಕುರಿತು ಹೈಕಮಾಂಡ್ ಆದೇಶವಿದ್ದು, ಯಾರು ಬಹಿರಂಗ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರಂತೆ.
ಆದಾಗ್ಯ ಸಾಕಷ್ಡು ಬೆಳವಣಿಗೆಗೆ ನಡೆಯುತ್ತಿದ್ದು, ರಾಜ್ಯ ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿದೆ ಎಂದು ಹೇಳಬಹುದು.
ದೇವೆಗೌಡರು ಸಹ ಪರಮೇಶ್ವರ ಮುಂದೆ ಕಾಂಗ್ರೆಸ್ಸಿಗರ ವರ್ತನೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.
ದೋಸ್ತಿ ಸರ್ಕಾರ ಮುಂದುವರೆಯುವದಾ ಬೇಡವಾ ಎಂಬ ಅನುಮಾನ ಮೂಡುತ್ತದೆ. ಇದರಿಂದ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವುದು ಕಷ್ಟಕರ. ಹೀಗಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರಿಗೆ ಕೂಡಲೇ ಕಾಂಗ್ರೆಸ್ ನಲ್ಲಿ ಉಂಟಾದ ಗೊಂದಲ ನಿವಾರಿಸಿ ಅಂತ ಹೇಳಿ ಇಲ್ಲವಾದಲ್ಲಿ ನೇರ ವಾಗಿ ದೋಸ್ತಿ ಸರ್ಕಾರದಿಂದ ಹಿಂದೆ ಸರಿಯುವಂತೆ ಹೇಳಲಿ,
ಸುಖಾಸುಮ್ಮನೆ ಗೊಂದಲ ಸೃಷ್ಟಿಸಿ ಪ್ರಗತಿ ಕುಂಠಿತಗೊಳಿಸುವುದು ಸರಿಯಲ್ಲ. ನಾಡಿನ ಜನತೆ ಪ್ರಶ್ನೆಗೆ ಮುಂದೆ ಉತ್ತರ ಕೊಡೋದು ಕಷ್ಟಕರ ಎಂದು ದೊಡ್ಡ ಗೌಡರು ಪರಮೇಶ್ವರ ಮುಂದೆ ಗುಡುಗಿದ್ದಾರೆ. ಈ ಕುರಿತು ಹೈಕಮಾಂಡಗೆ ತಿಳಿಸಲು ಸೂಚಿಸಿದ್ದಾರಂತೆ.