ಪ್ರಮುಖ ಸುದ್ದಿ

ಮಾ.31 ರಂದು ಮುದನೂರಿನಲ್ಲಿ ಆದ್ಯವಚನಕಾರ ದೇವರ ದಾಸಿಮಯ್ಯ‌ ರಥೋತ್ಸವ, ವಿವಿಧ ಕಾರ್ಯಕ್ರಮ FULL DETAIL

ಮುದನೂರ ದೇವರ ದಾಸಿಮಯ್ಯ ರಥೋತ್ಸವ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ

 

ಶ್ರೀಕ್ಷೇತ್ರ ಮುದನೂರಿನಲ್ಲಿ ಮಾರ್ಚ್ 31 ರಂದು ವಿಶ್ವಮಾನ್ಯ, ಆದ್ಯವಚನಕಾರ, ಶ್ರೀ ದೇವರ ದಾಸಿಮಯ್ಯನವರ ರಥೋತ್ಸವ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಸುಕ್ಷೇತ್ರದಲ್ಲಿ ಶ್ರೀದೇವರ ದಾಸಿಮಯ್ಯ ‌ರಥೋತ್ಸವ ಪುರಾಣ ಮಂಗಲ ವಿವಿಧ ಕಾರ್ಯಕ್ರಮಗ ವಿವರ ಇಲ್ಲಿದೆ.

ಬೆಳಿಗ್ಗೆ 6:00 ಗಂಟೆಗೆ 29/03/2023 ರಿಂದ 31/3/2023ರ ವರೆಗೆ ಯೋಗಾಸನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಮಹಾಸ್ವಾಮೀಜಿಯವರಿಂದ.
8:00 ಗಂಟೆಗೆ ಶ್ರೀ ರಾಮನಾಥ ದೇವರ, ಶ್ರೀ ಮಾತೆ ಚೌಡೇಶ್ವರಿ ದೇವಿಯ, ಶ್ರೀ ದೇವರ ದಾಸಿಮಯ್ಯನವರ ಅಭಿಷೇಕ ಅಯ್ಯಾಚಾರ, ಹೋಮ ಹವನ ಮಹಾಮಂಗಳಾರತಿ ಶ್ರೀನಿವಾಸ್ ಪುರೋಹಿತರು ಕೊಳ್ಳೇಗಾಲ ಇವರಿಂದ. ಪ್ರಸಾದ ವಿತರಣೆ.

10:೦೦ ಗಂಟೆಗೆ ಕರ್ನಾಟಕ ರಾಜ್ಯ ದೇವಾಂಗ ಸಂಘದಿಂದ ಕಾರ್ಯಕಾರಣಿ ಸಭೆ. 1:00 ಗಂಟೆಗೆ ಧಾರ್ಮಿಕ ಸಭೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು, ಶ್ರೀ ಗಾಯತ್ರಿ ಪೀಠ ಹೇಮಕೂಟ ಹಂಪಿ, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠ ಗುಳೇದಗುಡ್ಡ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಪದ್ಮಶಾಲಿ ಗುರುಪೀಠ ತುಮ್ಮಿನಕಟ್ಟಿ ರಾಣೆಬೆನ್ನೂರು. ಜಗದ್ಗುರು ಶ್ರೀ ಶ್ರೀ ಶ್ರೀ ಶಿವಶಂಕರ ಮಹಾಸ್ವಾಮಿಗಳು ಹುಬ್ಬಳ್ಳಿ. ಪರಮಪೂಜೆ ಜಗದ್ಗುರು ಶ್ರೀ ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಗದಗ-ಬೆಟಗೇರಿ. ಪರಮಪೂಜ್ಯ ಜಗದ್ಗುರುಗಳು ಶ್ರೀ ಶ್ರೀ ಶ್ರೀ ಚಿಕ್ಕರೆವಣ ಶಿವಶರಣರು ಅಕ್ಕಲಕೋಟ, ಪರಮಪೂಜ್ಯ ಶ್ರೀ ಶ್ರೀ ಜಗದ್ಗುರು ಘನಲಿಂಗ ಮಹಾಸ್ವಾಮಿಗಳು ಶ್ರೀ ಸಿದ್ದಾರೂಢ ಮಠ ನೀರಲಕೇರಿ ಬಾಗಲಕೋಟೆ, ಪರಮಪೂಜ್ಯ ಶ್ರೀ ಸದಾನಂದ ಮಹಾಸ್ವಾಮಿಗಳು ಶ್ರೀ ಶರಣ ಶಿವಲಿಂಗೇಶ್ವರ ಮಠ ಸಸ್ತಾಪುರ, ಪರಮ ಪೂಜ್ಯ ಶ್ರೀ ವೃಷಭೆಂದ್ರ ಮಹಾಸ್ವಾಮಿಗಳು ಬಸವ ಮಹಾಮನೆ ಪೀಠ ಕೊಡೆಕಲ. ಷ.ಬ್ರ ಶ್ರೀ ಚನ್ನಬಸವ ಪಟ್ಟದೇವರು ಶರಣಮಂಟಪ ಆಳಂದ, ಷ.ಬ್ರ ಅಭಿನವ ರೇವಣಸಿದ್ಧ ಪಟ್ಟದ್ದೆವರು ಮೈಂದರಗಿ ಶ್ರೀಮ.ನಿ.ಪ್ರ ಮೃತ್ಯುಂಜಯ ಮಹಾಸ್ವಾಮಿಗಳು ವಿರಕ್ತಮಠ ಮೈಂದರಗಿ, ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನಾಗರದಿನ್ನಿ. ಷ.ಬ್ರ ಗಿರಿಧರ ಶಿವಾಚಾರ್ಯರು ಮುದನೂರು, ಷ.ಬ್ರ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೂದನೂರು ಮೊದಲಾದ ಶ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಲದೆ ದೇವಾಂಗ ಸಮಾಜದ ನಾಯಕರು ಎಮ್ ಡಿ ಲಕ್ಷ್ಮೀನಾರಾಯಣ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರು ರವೀಂದ್ರ ಕಲಬುರ್ಗಿ, ಶ್ರೀ ಗಾಯತ್ರಿ ಪೀಠದ ಅಧ್ಯಕ್ಷರಾದ ಪಿ.ಆರ್ ಗಿರಿಯಪ್ಪ, ಟಿ.ರಾಜೇಶ್, ಸಿ.ಎನ್ ಭಂಡಾರಿ, ವೀರಸಂಗಪ್ಪ ಹಾವೇರಿ ಕೊಡೆಕಲ ಸೇರಿದಂತೆ ನೇಕಾರ ಸಮುದಾಯದ ಅನೇಕ ಗಣ್ಯ ವ್ಯಕ್ತಿಗಳು, ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಬಾಬು ಯಾಳಗಿಯವರಿಂದ ವಿಶೇಷ ಉಪನ್ಯಾಸ.

5:00 ಗಂಟೆಗೆ ಮಹಾ ರಥೋತ್ಸವ.
7:00 ಗಂಟೆಗೆ 15 ದಿನಗಳಿಂದ ನಡೆದುಕೊಂಡು ಬಂದಿರುವ ಶ್ರೀ ವಿಶ್ವಮಾನ್ಯ ಆದ್ಯವಚನಕಾರ ನೇಕಾರ ಸಂತ ದಾಸಿಮಯ್ಯನವರ ಮಹಾಪುರಾಣದ ಮಹಾಮಂಗಲ.
8:00 ಗಂಟೆಯಿಂದ ಯಾದಗಿರಿ ಜಿಲ್ಲೆಯ ಪೌರಾಯುಕ್ತರಾಗಿರುವ ಶ್ರೀ ಸಂಗಮೇಶ ಉಪಾಸೆಯವರ ಮಾರ್ಗದರ್ಶನದಲ್ಲಿ ಕಿರುತೆರೆ ಹಾಗೂ ಚಲನಚಿತ್ರ ಸಹಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾನಾ ಭಾಗದಿಂದ ಅಂದರೆ ಚಾಮರಾಜನಗರದಿಂದ ಬೀದರ ಜಿಲ್ಲೆಯ ವರೆಗಿನ ಅನೇಕ ಭಕ್ತರು ಪಾಲಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರಂತರ ಅನ್ನ ಸಂತರ್ಪಣೆ ಇರುತ್ತದೆ.

ತಾವುಗಳು ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ರಾಮನಾಥ, ಚೌಡೇಶ್ವರಿ ದೇವಿಯ ಹಾಗೂ ಶ್ರೀ ದಾಸಿಮಯ್ಯನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಎಂದು ಶ್ರೀ ಮುದನೂರು ಮಹಾಸಂಸ್ಥಾನ ಮಠದ ಡಾ. ಈಶ್ವರಾನಂದ ಸ್ವಾಮೀಜಿ, ಕಾರ್ಯದರ್ಶಿಗಳಾದ ಶ್ರೀ ರಾಮಸ್ವಾಮಿಯವರು ಹಾಗೂ ಮುದನೂರು ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button