ಶಹಾಪುರಃ ಎಂಇಎಸ್ ಪುಂಡರ ಬಂಧನಕ್ಕೆ ಆಗ್ರಹ
ಎಂಇಎಸ್, ಶಿವಸೇನೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ
yadgiri, ಶಹಾಪುರಃ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸಿದ ಪುಂಡಾಟಿಕೆಯನ್ನು ಖಂಡಿಸಿ ಮತ್ತು ಎಂಇಎಸ್ ಸಂಘಟನೆಯನ್ನು ಈ ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ಇಲ್ಲಿನ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಎಂಇಎಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಇಟಗಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಬೇಕೆಂಬ ವಿತಟ ನಿಲುವು ಹೊಂದಿದ್ದ ಎಂಇಎಸ್ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಭಗ್ನಗೊಳಿಸಿರುವದು ಖಂಡನೀಯವಾಗಿದೆ.
ಬೆಳಗಾವಿ ಕನ್ನಡಿಗರದ್ದು, ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡ ನಾಡಿನ ಉಸಿರು ಸೇವಿಸಿ ಬದುಕು ಕಟ್ಟಿಕೊಂಡಿರುವ ಪುಂಡ ಎಂಇಎಸ್ ಸಂಘಟಕರು ತಮ್ಮ ದುಶ್ಕøತ್ಯವನ್ನು ಎಸಗುತ್ತಲೆ ಇದ್ದಾರೆ. ಧರ್ಮ ಜಾತಿ ಜಾತಿ ಮಧ್ಯ ಕಿಚ್ಚು ಹೊತ್ತಿಸುವ ಇಂತಹ ದೇಶ ಮತ್ತು ನಾಡದ್ರೋಹಿಗಳಿಗೆ ಈ ಕೂಡಲೇ ತಕ್ಕ ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸೇನೆಯ ಉಕ ಭಾಗದ ಸಂಚಾಲಕ ದೇವು ಭೀ.ಗುಡಿ ಮಾತನಾಡಿ, ಕನ್ನಡಿಗರನ್ನು ಪದೆ ಪದೇ ಕೆಣಕುತ್ತಿರುವ ಎಂಇಎಸ್ ಮತ್ತು ಶಿವಸೇನೆಯ ಪುಂಡರನ್ನು ಈ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕೂಡಲೇ ಎಂಇಎಸ್ ಸಂಘಟನೆ ಕರ್ನಾಟಕದಲ್ಲಿ ನಿಷೇಧಿಸಬೇಕು.
ಇಲ್ಲವಾದಲ್ಲಿ ನಾಡಿನ ವೀರ ಕನ್ನಡಿಗರೆಲ್ಲರೂ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಮಧುರಾಜ ಕೂಡ್ಲಿಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುಭಾಶ ಹೋತಪೇಠ, ವೆಂಕಟೇಶ ಬೋನೇರ, ಭೀಮಾಶಂಕರ ಕಟ್ಟಿಮನಿ, ವಿಜಯಕುಮಾರ ಚಿಗರಿ, ಮಲ್ಲಿಕಾರ್ಜುನ ಕಟ್ಟಿಮನಿ, ಅಮರೀಶಗೌಡ ಸಗರ, ಪ್ರದೀಪ ಭೀ.ಗುಡಿ, ಶಿವಣ್ಣ ಭಿ.ಗುಡಿ, ಮಲ್ಲಿಕಾರ್ಜುನ ನಗನೂರ, ನಾಗರಾಜ ಹೊಸ್ಮನಿ, ಮಾಳಪ್ಪ ಪೂಜಾರಿ, ಮಲ್ಲನಗೌಡ ರಾಯಚೂರ, ಮರಿಲಿಂಗ ಎಕ್ಕಿಗಡ್ಡಿ, ಲೋಕನಾಥ ದೋರನಹಳ್ಳಿ, ಮಾದೇಶ ನಾಯಕ ಇತರರಿದ್ದರು.