Railway Jobs: ಬಿ.ಕಾಂ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ
KRCL Recruitment 2024: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ಸೆಕ್ಷನ್ ಆಫೀಸರ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ.
ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜೂನ್ 18, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ರೆಸ್ಯೂಮ್ ಕಳುಹಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಾರವಾರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಶೈಕ್ಷಣಿಕ ಅರ್ಹತೆ:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಕಾಂ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 31, 2024ಕ್ಕೆ ಗರಿಷ್ಠ 62 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ. ಅವರ ಅನುಭವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ಕೊಡಲಾಗುತ್ತದೆ.
ಉದ್ಯೋಗದ ಸ್ಥಳ:
ಕಾರವಾರ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ krclredepu@krcl.co.in ಗೆ ಜೂನ್ 18ರೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 31/05/2024
ಇ-ಮೇಲ್ ಕಳುಹಿಸಲು ಕೊನೆಯ ದಿನ: ಜೂನ್ 18, ೨೦೨೪