ಪ್ರಮುಖ ಸುದ್ದಿ
ಸಿಡಿಲಾರ್ಭಟಕ್ಕೆ ನಾಲ್ಕು ಜಾನುವಾರು ಮೃತ
ರಾತ್ರಿ ಭಾರಿ ಮಳೆಃ ಸಿಡಿಲು ಬಡಿದು ನಾಲ್ಕು ಜಾನುವಾರು ಮೃತ
ಸಿಡಿಲು ಬಡಿದು ನಾಲ್ಕು ಜಾನುವಾರು ಮೃತ
ರಾತ್ರಿ ಭಾರಿ ಮಳೆ ನಡುವೆ ಗುಡುಗು, ಸಿಡಿಲು ಆರ್ಭಟ
ಯಾದಗಿರಿ, ಶಹಾಪುರಃ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ನಡುವೆ ಸಿಡಿಲು ಬಡಿದು ನಾಲ್ಕು ಮೂಕ ಪ್ರಾಣಿಗಳು ಜೀವ ಕಳೆದುಕೊಂಡ ಘಟನೆ ತಾಲೂಕಿನ ಚಾಮನಾಳ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಭಾರಿ ಮಳೆಯಾಗಿದ್ದು, ಗುಡುಗು ಮಿಂಚು ಮಿಶ್ರಿತ ಮಳೆ ನಡುವೆ ಸಿಡಿಲೊಡೆದು ರೈತ, ಜಾನುವಾರು ಮಾಲೀಕ ಗೌಡಪ್ಪ ತಂದೆ ಹಣಮಂತ್ರಾಯ ಗ್ಯಾಂಗ್ ಇವರು ಮನೆ ಮುಂದೆ ಕೊಠಗಿಯಲ್ಲಿ ಕಟ್ಟಿದ ಎರಡು ಎತ್ತು, ಒಂದು ಆಕಳು ಮತ್ತು ಒಂದು ಎಮ್ಮೆ ಮೃತಪಟ್ಟಿವೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾನುವಾರು ಮಾಲೀಕರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗೊಳ್ಳಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.