ಪ್ರಮುಖ ಸುದ್ದಿ

ಅತೃಪ್ತ ಶಾಸಕರಿಗೆ ಬಿಸಿ ಮುಟ್ಟಿಸಿದ ಯುವ ಕಾಂಗ್ರೆಸ್!

ಮುಂಬೈ: ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರು ತಂಗಿರುವ ಖಾಸಗಿ ಹೋಟೆಲ್ ಎದುರು ಮಹಾರಾಷ್ಟ್ರದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಾವು ರಾಹುಲ್ ಗಾಂಧಿ ಸಿಪಾಯಿಗಳು ಯಾವುದಕ್ಕೂ ಜಗ್ಗೋದಿಲ್ಲ. ಮೋದಿ ಪಕ್ಷದ ದಬ್ಬಾಳಿಕೆ ನಡೆಯೋದಿಲ್ಲ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಆ ಮೂಲಕ ಹೋಟೆಲ್ ನಲ್ಲಿ ತಂಗಿರುವ ಶಾಸಕರಿಗೆ ಬಿಸಿ ಮುಟ್ಟಿಸಿದರು.

ಸ್ಥಳಕ್ಕೆ ಆಗಮಿಸಿದ ಮುಂಬೈ ಪೊಲೀಸರು ಪ್ರತಿಭಟನಾಕಾರರು ಖಾಸಗಿ ಹೋಟೆಲ್ ಗೆ ಮುತ್ತಿಗೆ ಹಾಕುವುದನ್ನು ತಡೆದರು. ಬಳಿಕ ಸುಮಾರು ಐವತ್ತಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Related Articles

Leave a Reply

Your email address will not be published. Required fields are marked *

Back to top button