Homeಜನಮನಮಹಿಳಾ ವಾಣಿವಿನಯ ವಿಶೇಷ

ಬೊಂಬಾಟ್ ರುಚಿಯ ಮಾವಿನ ಹಣ್ಣಿನ ಸಾರು..! ಒಮ್ಮೆ ತಿಂದರೆ ರುಚಿ ಹಿಡಿದು ಬಿಡುತ್ತೀರಿ

ಗ ಮಾವಿನ ಹಣ್ಣಿನ ಸೀಸನ್. ಎಲ್ಲಿ ನೋಡಿದ್ರು ಮಾವಿನಹಣ್ಣು ಮಾವಿನ ಕಾಯಿ ಕಣ್ಣಿಗೆ ಬೀಳುತ್ತೆ. ಅದ್ರಲ್ಲೂ ಮಾವಿನಕಾಯಿ ಚಟ್ನಿ, ಮಾವಿನ ಉಪ್ಪಿನಕಾಯಿ, ಮಾವಿನ ಹಣ್ಣಿನ ಸಾರು ತಿನ್ನದವರೇ ಇಲ್ಲ. ಎಲ್ಲರ ಮನೆಯಲ್ಲೂ ಈಗ ಮಾವಿನದ್ದೆ ಸುವಾಸನೆ.

ಮಾವು ಹಣ್ಣಾಗಿದ್ದರೂ ಸರಿ ಇಲ್ಲವೆ ಕಾಯಿಯಾದರು ಅಡುಗೆಗೆ ಬರುತ್ತದೆ.

ಅದರಲ್ಲೂ ಮಾವಿನ ಹಣ್ಣು ಹಾಕಿ ಮಾಡುವ ಸಾರು ಎಷ್ಟು ರುಚಿಯಾಗಿರುತ್ತೆ ಅಂದ್ರೆ ಒಮ್ಮೆ ನೀವು ರುಚಿ ನೋಡಿದರೆ ಮತ್ತೆ ಮತ್ತೆ ಸವಿಯುತ್ತಲೇ ಇರುತ್ತೀರಿ. ಅಷ್ಟೇ ಅಲ್ಲ ಇದರ ರುಚಿಯಲ್ಲಿ ನೀವು ಹೆಚ್ಚು ಹೆಚ್ಚು ಊಟ ಮಾಡೋದು ಕನ್ಫರ್ಮ್‌.

ಆದ್ರೆ ಈ ಮಾವಿನ ಹಣ್ಣಿನ ಸಾರು ಮಾಡುವುದಾದ್ರು ಹೇಗೆ? ಇದು ಎಲ್ಲರ ಮನದಲ್ಲೂ ಇರುವ ಪ್ರಶ್ನೆ. ಏಕೆಂದರೆ ಇದು ಸೀಸನಲ್ ರೆಸಿಪಿ. ಯಾವಾಗಲೂ ಮಾಡಲಾಗುವುದಿಲ್ಲ ಜೊತೆಗೆ ಆಗಾಗ ಮಾಡುವುದರಿಂದ ನೆನಪಿಟ್ಟುಕೊಳ್ಳುವುದು ಸಹ ಕಷ್ಟವಾಗುತ್ತದೆ. ಹೀಗಾಗಿ ಕೆಲವರು ಇದನ್ನು ಮಾಡುವ ಆಸೆ ಇದ್ದರೂ ಅದರ ಪಾಕ ವಿಧಾನ ತಿಳಿಯದೆ ಸುಮ್ಮನಾಗುತ್ತಾರೆ.

ಈ ಮಾವಿನ ಸಾರು ಅನ್ನದ ಜೊತೆ ಸವಿಯಲು ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಹಾಗಾದ್ರೆ ನಾವಿಂದು ಈ ಮಾವಿನ ಹಣ್ಣಿನ ಸಾರು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ಪಾಕವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.

ಮಾವಿನ ಹಣ್ಣಿನ ಸಾರಿ ಮಾಡಲು ಬೇಕಾಗುವ ವಸ್ತುಗಳು

  • ಮಾವಿನ ಹಣ್ಣು – 5
  • ಸಾವಿವೆ ಜೀರಿಗೆ
  • ಕರಿಬೇವು
  • ಬೆಳ್ಳುಳ್ಳಿ
  • ಕಡಲೆ ಬೇಳೆ
  • ಮೆಂತ್ಯ
  • ಬೆಲ್ಲ
  • ಉದ್ದಿನ ಬೇಳೆ
  • ದನಿಯಾ
  • ತೆಂಗಿನ ತುರಿ
  • ಅರಶಿಣ

ಮಾವಿನ ಹಣ್ಣಿನ ಸಾರು ಮಾಡುವ ವಿಧಾನ

ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗದು ಆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಹಿಸುಕಿಕೊಳ್ಳಿ ಬಳಿಕ ಸಿಪ್ಪೆಯನ್ನು ತೆಗೆದು ಎಸೆಯಿರಿ. ಅದರ ರಸ ಮಾತ್ರ ಬಳಕೆ ಮಾಡಬೇಕು. ಈಗ ಒಂದು ಪಾತ್ರೆಗೆ ಮಾವಿನ ಹಣ್ಣು ಹಾಕಿ ಅದಕ್ಕೆ ರಸವನ್ನು ಸುರಿದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ ಒಲೆ ಮೇಲೆ ಇಡಿ.

ಬಳಿಕ ಇದಕ್ಕೆ ಕರಿಬೇವು, ಬೆಲ್ಲ, ಉಪ್ಪು ಹಾಕಿಕೊಂಡು ಬೇಯಿಸಿಕೊಳ್ಳಿ. ಇನ್ನೊಂದು ಕಡೆ ಮಸಾಲೆ ಮಾಡಿಕೊಳ್ಳಿ. ಒಲೆ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸು ಹಾಕಿ ಫ್ರೈ ಮಾಡಿ. ಇದರ ಜೊತೆ ಫ್ರೈ ಮಾಡುವಾಗ ಉದ್ದಿನ ಬೇಳೆ, ಮೆಂತ್ಯ, ಕಡಲೆ ಬೇಳೆ ಹಾಕಿಕೊಳ್ಳಿ.

ಫ್ರೈ ಆದ ಬಳಿಕ ದನಿಯಾ, ಜೀರಿಗೆ, ಸಾಸಿವೆ ಹಾಕಿಕೊಂಡಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಬಳಿಕ ಕೊನೆಯಲ್ಲಿ ಸ್ವಲ್ಪ ತೆಂಗಿನ ತುರಿ ಹಾಕಿಕೊಳ್ಳಿ. ತೆಂಗಿನ ತುರಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಮಸಾಲ ಮಾಡಿಕೊಳ್ಳಿ. ಇದಕ್ಕೆ ಹುಳಿ ಹಾಕುವ ಅಗತ್ಯವಿಲ್ಲ. ಮಾವಿನ ಕಾಯಿ ಹುಳಿ ಬಿಡುತ್ತದೆ.

ಇತ್ತ ಒಲೆ ಮೇಲೇ ಇಟ್ಟ ಮಾವಿನ ಹಣ್ಣು ಬೆಂದಿದೆಯೇ ಎಂಬುದನ್ನು ನೋಡಿ. ಆಗಾಗ ಕಲಸಿಕೊಳ್ಳಿ. ಇತ್ತ ಮಸಾಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಮಾವಿನ ಹಣ್ಣು 15ರಿಂದ 20 ನಿಮಿಷ ಬೆಂದರೆ ಸಾಕು. ಇದಕ್ಕೆ ಅರಶಿಣ ಹಾಗೂ ರುಬ್ಬಿಕೊಂಡ ಮಸಾಲೆಯನ್ನು ಅದಕ್ಕೆ ಸೇರಿಸಿಕೊಳ್ಳಿ, ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. 15 ನಿಮಿಷದ ಬಳಿಕ ಕೊನೆಯಲ್ಲಿ ಕರಿಬೇವು ಹಾಕಿಕೊಂಡಿ ಸಾರು ಇಳಿಸಿಕೊಳ್ಳಿ.

ಆದರೆ ಇನ್ನೊಂದು ಕಡೆ ಒಗ್ಗರೆಣೆ ಮಾಡಿ ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿಕೊಂಡು ಒಂದು ನಿಮಿಷ ಫ್ರೈ ಮಾಡಿ ಅದನ್ನು ಮಾವಿನ ಹಣ್ಣಿನ ಸಾರಿಗೆ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಸಾರು ರೆಡಿಯಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button