Home
ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ನಿಗದಿಯಂತೆ ನಡೆಯಲಿದೆ – ಸಚಿವ ನಾಗೇಶ್
ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯವಿಲ್ಲ – ಸಚಿವ ಬಿ.ಸಿ.ನಾಗೇಶ
ಈ ವರ್ಷವೂ ಮಕ್ಕಳಿಗೆ ಹಾಜರಾತಿ ಕಡ್ಡಾಯವಿಲ್ಲ – ನಾಗೇಶ್
ಬೆಂಗಳೂರಃ ಕೋವಿಡ್ ತೀವ್ರತೆ ಹಿನ್ನೆಲೆ ನಗರದಲ್ಲಿ ಒಂದರಿಂದ 10 ನೇ ತರಗತಿ ಶಾಲೆಗೆ ರಜೇ ಘೋಷಣೆ ಮಾಡಲಾಗಿತ್ತು. ಆದರೆ ತಜ್ಞರೊಂದಿಗೆ ಚರ್ಚೆ ಮಾಡಿದ್ದು, ಯಾವುದೇ ತೊಂದರೆಯಾಗುವದಿಲ್ಲ. ಕೋವಿಡ್ ನಿಯಮಾವಳಿ ಪಾಲಿಸಿ ಶಾಲೆ ಆರಂಭಿಸಬಹುದು ಎಂದು ತಜ್ಞರು ಸಲಹೆ ನೀಡಿರುವ ಕಾರಣ ಸೋಮವಾರದಿಂದ ನಗರದಲ್ಲಿ ಶಾಲೆ ಅಂರಂಭವಾಗಲಿವೆ ಎಂದು ಸಚಿವ ಬಿ.ಸಿ.ನಾಗೇಶ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ನಿಗದಿತ ವೇಳೆಗೆ ನಡೆಯಲಿವೆ. ಅಲ್ಲದೆ ಚಂದನ, ಆಕಾಶವಾಣಿಯಲ್ಲಿ ಪಠ್ಯ ಬೋಧನೆ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.