ಪ್ರಮುಖ ಸುದ್ದಿ
ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ BSY
ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ಬಿಎಸ್ ವೈ
ಬೆಂಗಳೂರಃ ಕಾವೇರಿ ನದಿ ತುಂಬಿರುವ ಹಿನ್ನೆಲೆ ಇಂದು ಮುಖ್ಯ ಮಂತ್ರಿ ಯಡಿಯೂರಪ್ಪ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ರೈತಾಪಿ ಜನರ ಸಂಕಷ್ಟ ನಿವಾರಿಸಿ, ಬೆಳೆ, ಮಳೆ ಕಾಲಕಾಲಕ್ಕೆ ಆಗಮಿಸಿ ಕರುನಾಡನ್ನು ಸಮೃದ್ಧವಾಗಿಸು, ಪ್ರಪಂಚಕ್ಕೆ ಅಂಟಿಕೊಂಡಿರುವ ರೋಗ ತೊಲಗಿಸು ತಾಯಿ ಎಂದು ಪ್ರಾರ್ಥಿಸಿದರು ಎನ್ನಲಾಗಿದೆ.
ಈ ಸಂದರ್ಭ ಜಿಲ್ಲಾ ಉಸ್ತುವಾರಿ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಇತರರು ಇದ್ದರು.