ಕೋತಿಯಾಟ ಆನೆಗೆ ಸಂಕಟ..ಕೋತಿ ಕ್ಷಮೆ ಮನ್ನಿಸಿದ ಗಜರಾಜ
ಮುಯ್ಯಿಗೆ ಮುಯ್ಯಿ
ಒಂದು ಕಾಡಿನಲ್ಲಿ ಒಂದು ಆನೆ ಮತ್ತು ಕೋತಿ ವಾಸವಾಗಿದ್ದವು. ಬಹಳ ಸ್ನೇಹಿತರಾಗಿದ್ದರು. ಒಂದು ದಿನ ಕೋತಿಯು ‘ನದಿಯ ಆ ಭಾಗದಲ್ಲಿ ದೊಡ್ಡ ಕಬ್ಬಿನ ತೋಟವಿದೆ. ಅಲ್ಲಿಗೆ ಹೋಗಿ ಚೆನ್ನಾಗಿ ತಿಂದು ಬರೋಣ. ನಿನಗೆ ಅದನ್ನು ತೋರಿಸುವೆ’ ಎಂದಾಗ ಆನೆ ಒಪ್ಪಿತು.
ಆನೆ ಕೋತಿಯನ್ನು ಹೊತ್ತುಕೊಂಡು ಹೋಯಿತು. ಆನೆ ಕಬ್ಬನ್ನು ಯಥೇಚ್ಛ ತಿಂದಾಗ ಕೋತಿಯೂ ಅಲ್ಲಿನ ಮಾವಿನ ಮರದಲ್ಲಿರುವ ಹಣ್ಣುಗಳನ್ನೆಲ್ಲ ಖಾಲಿ ಮಾಡಿತು. ಆನಂತರ ಮರದಿಂದ ಮರಕ್ಕೆ ಹಾರಿ ಗದ್ದಲವನ್ನೇ ಉಂಟು ಮಾಡಿತು. ಆಗ ಅಲ್ಲಿರುವ ಆಳು ದೊಣ್ಣೆ ತೆಗೆದುಕೊಂಡು ಓಡಿಬಂದಾಗ ಅವನ ಕಣ್ಣಿಗೆ ಆನೆ ಕಂಡಿತು. ದೊಣ್ಣೆಯಿಂದ ಚೆನ್ನಾಗಿ ಆನೆಯನ್ನು ಬಡಿದು ಓಡಿಸಿದ.
ನೊಂದ ಆನೆ ಕೋತಿಯೊಂದಿಗೆ ‘ನೀನು ಹಣ್ಣುಗಳನ್ನು ತಿಂದ ಮೇಲೆ ಯಾಕೆ ಹಾಗೆಲ್ಲ ರಂಪಾಟ ಮಾಡಿದೆ? ನಾನೆಷ್ಟು ನೊಂದೆ ಗೊತ್ತೇ?’ ಎಂದಿತು.
ಆಗಲೂ ಕೋತಿ ಸಂತೋಷದಿಂದಲೇ ‘ಅತೀವ ಖುಷಿಯಾದಾಗ ಹೀಗೇನೇ ನಾನು ಸಂಭ್ರಮವನ್ನು ಆಚರಿಸುವುದು’ ಎಂದು ತಟ್ಟಿ ಹಾರಿಸಿತು.
ಈಗ ಕಾಡಿಗೆ ಹಿಂದಿರುಗಲೆಂದು ಕೋತಿ ಆನೆಯ ಮೇಲೆ ಕುಳಿತಿತು. ನದಿಯ ಮಧ್ಯದಲ್ಲಿ ಆನೆ ನೀರಿನಲ್ಲಿ ಉರುಳಾಡಲು ತೊಡಗಿತು. ಹೆದರಿದ ಕೋತಿ ‘ಯಾಕೆ ಹಾಗೆ ಮಾಡುವಿ?’ ಎಂದಾಗ ‘ಊಟವಾದ ಮೇಲೆ ಹೊಟ್ಟೆ ತುಂಬಿದ ಸಂತೋಷವನ್ನು ನಾನು ಹೀಗೇನೇ ವ್ಯಕ್ತಪಡಿಸುವುದು!’ ಎಂದಿತು ಆನೆ ಜಂಬದಿಂದಲೇ.
ತಕ್ಷಣವೇ ಕೋತಿಗೆ ತನ್ನ ತಪ್ಪಿನ ಅರಿವಾಗಿ ಆನೆಯ ಕ್ಷಮೆ ಕೇಳಿತು. ಒಳ್ಳೆ ಹೃದಯದ ಆನೆಯು ಕೋತಿಯನ್ನು ಕ್ಷಮಿಸಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.