Homeಜನಮನಪ್ರಮುಖ ಸುದ್ದಿ
‘ಕೋರ್ಟ್ ತೀರ್ಪಿಗೆ ತಲೆ ಬಾಗಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವುದೇ ಸೂಕ್ತ’: ಡಾ. ಕೆ. ಸುಧಾಕರ್

ರಾಮನಗರ: ಮುಡಾ ಹಗರಣದಲ್ಲಿ ಕೋರ್ಟ್ ತೀರ್ಪಿಗೆ ತಲೆ ಬಾಗಿ ಪರಿಸ್ಥಿತಿ ಅವಲೋಕಿಸಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವುದೇ ಸೂಕ್ತ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಸಲಹೆ ನೀಡಿದರು. ನಗರದಲ್ಲಿ ಮಾತನಾಡಿದ ಅವರು, ಕಾನೂನಿಗೆ ಯಾರು ದೊಡ್ಡವರಲ್ಲ. ನ್ಯಾಯಾಲಯದ ತೀರ್ಪುಗಳಿಗೆ ನಿಯಮಗಳಿಗೆ ಜನಪ್ರತಿನಿಧಿಗಳು ಗೌರವ ಕೊಡಬೇಕು ಎಂದರು.ಮಾಗಡಿ ತಾಲೂಕಿನ ಸೋಲೂರು ಹಾಗೂ ತಿಪ್ಪಸಂದ್ರ ಈ ಎರಡು ಹೋಬಳಿ ಕೇಂದ್ರಗಳಲ್ಲಿ ಬೆಂಗಳೂರು, ಹಾಸನ ರೈಲ್ವೆ ಮಾರ್ಗವಿದೆ.
ಜತೆಗೆ ರೈಲು ನಿಲ್ದಾಣವನ್ನು ಸಹ ರೈಲ್ವೆ ಇಲಾಖೆ ಮಾಡಿದೆ. ಆದರೆ ನಿತ್ಯ ಓಡಾಟ ನಡೆಸುವ 12 ರಿಂದ 13 ರೈಲುಗಳ ಪೈಕಿ ಕೇವಲ 2 ರೈಲುಗಳಿಗೆ ಮಾತ್ರ ನಿಲುಗಡೆಗೆ ಅವಕಾಶವಿದೆ. ಎಲ್ಲಾ ರೈಲುಗಳನ್ನು ಸೋಲೂರು ಹೋಬಳಿ ಕೇಂದ್ರದಲ್ಲಿ ನಿಲುಗಡೆ ಮಾಡುವಂತೆ ಕೇಂದ್ರದ ರೈಲ್ವೆ ಸಚಿವರು ಮತ್ತು ರಾಜ್ಯ ಸಚಿವರಲ್ಲೂ ಸೋಲೂರು ಜನರ ಪರವಾಗಿ ಮನವಿ ಮಾಡಬೇಕು ಎಂದು ಸಂಸದರಿಗೆ ಜನರು ಮನವಿ ಇಟ್ಟರು.