ಜನಾರ್ಧನ ರಡ್ಡಿ V/s ನಾರಾ ರಡ್ಡಿ, ಅಕ್ಷರಶಃ ರಾತ್ರಿ ಬಳ್ಳಾರಿ ರಣಾಂಗಣ
ಬ್ಯಾನರ್ ಗಲಾಟೆಃ ಕಲ್ಲೂ ತೂರಾಟ, ಬಡಿದಾಟ, ಗಾಳಿಯಲ್ಲಿ ಗುಂಡು, ಗುಂಡೇಟಿಗೆ ಓರ್ವ ಬಲಿ
ಜನಾರ್ಧನ ರಡ್ಡಿ V/s ನಾರಾ ರಡ್ಡಿ
ಅಕ್ಷರಶಃ ರಾತ್ರಿ ಬಳ್ಳಾರಿ ರಣಾಂಗಣ
ಬ್ಯಾನರ್ ಗಲಾಟೆಃ ಕಲ್ಲೂ ತೂರಾಟ, ಬಡಿದಾಟ, ಗಾಳಿಯಲ್ಲಿ ಗುಂಡು, ಗುಂಡೇಟಿಗೆ ಓರ್ವ ಬಲಿ
ವಿನಯವಾಣಿ
ಬಳ್ಳಾರಿಃ ನಗರದ ಎಸ್ ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರವಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ 1. ಜನಾರ್ದನ ರೆಡ್ಡಿ ಮನೆಯ ಬಳಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಖಾಸಗಿ ಗನ್ ಮ್ಯಾನ್ ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎಂಬಾತ ಮೃತಪಟ್ಟಿದ್ದಾನೆ.
ಇದೇ ವೇಳೆ ಜನಾರ್ದನ ರೆಡ್ಡಿ ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ತಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಅದು ವಾಹನಕ್ಕೆ ಬಡಿದು ಜೀವಂತ ಗುಂಡು ನನಗೆ ದೊರೆತಿದ್ದು ಅದು ಇಲ್ಲದೆ ನೋಡಿ ಎಂದು ಗುಂಡು ಪ್ರದರ್ಶಿಸುವ ಮೂಲಕ ಸಾಕ್ಷಿ ಕೊಟ್ಟರು.
ಈ ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.




