ಬೈಕ್ ಗೆ ಕಾರ್ ಡಿಕ್ಕಿ ಇಬ್ಬರ ಸಾವು.!? ಸ್ಥಳದಲ್ಲಿದ್ದ ವೈದ್ಯರಿಂದ ಉಪಚಾರ
ಬೈಕ್ ಗೆ ಕಾರ್ ಡಿಕ್ಕಿ ಇಬ್ಬರ ಸಾವು.!?
ಕಲಬುರ್ಗಿಃ ವೇಗವಾಗಿ ಚಲಿಸುತ್ತಿರುವ ಸ್ವಿಫ್ಟ್ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಅಸುನೀಗಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾರ್ವಜನಿಕರೇ ಕಳುಹಿಸಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಅವರಾದ ಕ್ರಾಸ್ ಹತ್ತಿರ ನಡೆದಿದೆ.
ಕಾರೊಂದು ಚಾಲಕನ ನಿರ್ಲಕ್ಷದಿಂದ ರಭಸದಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ನೋಡಿದ್ದು, ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಗಂಭೀರ ಇರುವದನ್ನು ಕಂಡು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಆಗ ಪ್ರತ್ಯಕ್ಷ ಸ್ಥಳದಲ್ಲಿದ್ದ ಡಾ.ಆನಂದಕುಮಾರ ಅವರು, ಗಂಭೀರಗಾಯಗೊಂಡವರನ್ನು ಪರೀಕ್ಷಿಸಿ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಲು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ನಾಗರಿಕರು ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ ಎಂದು ಸುಮ್ಮನಾಗಿದ್ದರು. ಠಾಣೆಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು.
ಆದರೆ ಸ್ಥಳದಲ್ಲಿದ್ದ ಡಾ.ಆನಂದ ಗಾಯಾಳುವನ್ನು ಪರೀಕ್ಷಿಸಲಾಗಿ, ಓರ್ವ ಮೃತಪಟ್ಟಿದ್ದು, ಇನ್ನೋರ್ವನ ಪಲ್ಸ್ ಚಕ್ ಮಾಡಿದ ವೈದ್ಯರು ಕೂಡಲೇ ಕಲಬುರ್ಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಿನಯವಾಣಿಗೆ ತಿಳಿಸಿದ್ದಾರೆ.