Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಬೀಟ್‌ ರೂಟ್‌ ಜ್ಯೂಸ್‌ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

ಮಳೆಗಾಲ ಬಂತು ಅಂದ್ರೆ ಸಾಕು ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ.ನಾವು ಈ ಸೀಸನ್​ನಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿವಹಿದರೂ ಸಾಲದ್ದು,ಆದ್ದರಿಂದ ನಾವು ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ ಬೀಟ್ರೂಟ್ ಜ್ಯೂಸ್ ಸೇವಿಸುವ ಜನರು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದು ನೈಟ್ರೇಟ್‌ಗಳಲ್ಲಿ ಅಧಿಕವಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ.

ಪ್ರಮುಖವಾಗಿ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು, ನೈಟ್ರೇಟ್ ಅಂಶಗಳು, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಕಬ್ಬಿಣಾಂಶ, ಕ್ಯಾಲ್ಸಿಯಂ,ತಾಮ್ರ ಹಾಗೂ ಇತರ ಖನಿಜಾಂಶಗಳು ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಹೃದಯದ ಮೇಲಿನ ಒತ್ತಡ ಕಡಿಮೆ ಮಾಡಿ ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ನೆರವಿಗೆ ಬರುತ್ತದೆ. ಚರ್ಮದ ಸೌದರ್ಯಕ್ಕೆ ರಾಮಬಾಣವಿದ್ದಂತೆ. ರಕ್ತದೊತ್ತಡವನ್ನು ನಿಯಮತ್ರಿಸಲು ಸಹಕಾರಿ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕ ರಕ್ತಹೀನತೆ ಸಮಸ್ಯೆಯಿಂದ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ. ರಕ್ತ ಸಂಚಾರ ಸುಗಮವಾಗಿ ಕಾರ್ಯನಿರ್ವಹಿಸುಲು ಸಹಾಯಕವಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button