ಪ್ರಮುಖ ಸುದ್ದಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು ಕೇಳಿದಿರಾ?
ವಿಜಯಪುರ: ಇದೇ ದೇಶದ ಅನ್ನ ತಿನ್ನುತ್ತಾರೆ, ಗಾಳಿ , ನೀರು ಎಲ್ಲವೂ ನಮ್ಮ ದೇಶದ್ದೇ ಪಡೆದು ನಮ್ಮ ದೇಶದ ವಿರುದ್ಧವೇ ಕೆಲವರು ಘೋಷಣೆ ಕೂಗುತ್ತಾರೆ. ಅದಕ್ಕಿಂತಲೂ ದುರಂತ, ಅಪಾಯಕಾರಿ ಅಂದರೆ ಬುದ್ಧಿಜೀವಿಗಳು, ಜಾತ್ಯಾತೀತರು ಎಂದು ಹೇಳಿಕೊಳ್ಳುವವರು. ನಾನು ಏನಾದ್ರೂ ಗೃಹ ಸಚಿವ ಆಗಿದ್ದರೆ ಅಂಥವರನ್ನು ನಿಲ್ಲಿಸಿ ಗುಂಡು ಹಾಕಲು ಸೂಚಿಸುತ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾದಂಥವರು ಸೈನಿಕರು ಮಹಿಳಾ ದೌರ್ಜನ್ಯ ನಡೆಸುತ್ತಾರೆ ಎಂಬ ಹೇಳಿಕೆ ನೀಡುತ್ತಾರೆ. ದೇಶ ಕಾಯುವ ಸೈನಿಕರು ಅಂಥಾ ಕೃತ್ಯವೆಸಗಲು ಸಾಧ್ಯವೇ ಎಂದು ಕಿಡಿ ಕಾರಿದರು. ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು.