ಪ್ರಮುಖ ಸುದ್ದಿ
ಪ್ರಾದೇಶಿಕ ಪ್ರಾತಿನಿಧ್ಯ ನೀಡದಿರುವುದು ದುರದೃಷ್ಟಕರ – ಖರ್ಗೆ
ಕಲಬುರಗಿ : ಇಡೀ ಹೈದ್ರಾಬಾದ್ ಕರ್ನಾಟಕದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. ಕೇಂದ್ರ ಬಿಜೆಪಿಗೆ ಕರ್ನಾಟಕ ಮೊದಲ ಆದ್ಯತೆ ಅಲ್ಲವೆಂದು ತೋರುತ್ತಿದೆ. ಮತ್ತು ಕರ್ನಾಟಕ ಬಿಜೆಪಿ ಹೈದ್ರಾಬಾದ್ ಕರ್ನಾಟಕವನ್ನು ಅನಾಥಗೊಳಿಸಿದೆ. ಪ್ರಾಧೇಶಿಕ ಪ್ರಾತಿನಿಧ್ಯ ಸಿಗದಿರುವುದು ದುರದೃಷ್ಟಕರ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡುವ ಮೂಲಕ ನೂತನ ಸಚಿವ ಸಂಪುಟದ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
The entire Hyd-Kar has a single representation. Looks like Karnataka is not a top priority for Central BJP & @BJP4Karnataka has orphaned Hyd-Kar. Regional headquarters Kalaburagi doesn’t even get a representation. Very unfortunate that we didn’t get regional representation.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 20, 2019