ಬ್ರಿಟಿಷ್ ಕಾಲದ ನ್ಯಾಯ ದೇವತೆ ಬದಲಾಗಿದ್ದಾಳೆ..! ಭಾರತೀಯ ನ್ಯಾಯ ದೇವತೆಯಾಗಿ ಕಣ್ಣು ತೆರೆದು ನಿಂತಿದ್ದಾಳೆ.!
ಹಳೇಯ ನ್ಯಾಯ ದೇವತೆ ಬದಲಾಗಿದ್ದಾಳೆ ಆಅಕೆ ಈಗ ಭಾರತೀಯ ನ್ಯಾಯ ದೇವತೆ ಕಣ್ಣು ತೆರೆದಿರ್ತಾಳೆ
ಬ್ರಿಟಿಷ್ ಕಾಲದ ಕುರುಡು ನ್ಯಾಯದೇವತೆ ತೆಗೆದು ಭಾರತೀಯತೆ ಮೆರೆದ ಚಂದ್ರಚೂಡ್ ರಿಂದ ಕಣ್ಣು ತೆರೆದ ನ್ಯಾಯ ದೇವತೆ ಸ್ಥಾಪನೆ.!
ಇನ್ಮುಂದೆ ನ್ಯಾಯದೇವತೆ ಕುರುಡಲ್ಲ. ಆಕೆ ಕಣ್ಣು ತೆರೆದಿರುತ್ತಾಳೆ ನ್ಯಾಯ ನೀಡ್ತಾಳೆ, ಭಾರತೀಯ ನ್ಯಾಯದೇವತೆ
ನವದೆಹಲಿಃ ರಾಜ್ಯ ಮತ್ತು ರಾಷ್ಟ್ರದ ಸುಪ್ರೀಕೋರ್ಟ್ ನಿಂದ ಹಿಡಿದು ಎಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ಚಲನಚಿತ್ರಗಳು ಮತ್ತು ಕಾನೂನು ಕೊಠಡಿಗಳಲ್ಲಿ ಕಣ್ಣುಮುಚ್ಚಿಕೊಂಡು ಕಾಣುವ ‘ನ್ಯಾಯ ದೇವತೆ’ ಪ್ರತಿಮೆನ್ನು ಎಲ್ಲರೂ ನೋಡಿರಬಹುದು. ಆದರೆ ಪ್ರಸ್ತುತ ಬದಲಾಗುತ್ತಿರುವ ಭಾರತದಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ನ್ಯಾಯದೇವತೆ ಪ್ರತಿಮೆಯನ್ನು
ಸಾಂಕೇತಿಕಾಗಿ ಬದಲಾವಣೆ ಅಂದರೆ ಕಣ್ಣಿಗೆ ಕಟ್ಟಿದ ಬಟ್ಟಿ ತೆಗೆಯಲಾಗಿದೆ ಅಲ್ಲದೆ ಆಕೆ ಕೈಯಲ್ಲಿರುವ ಖಡ್ಗವನ್ನು ತೆಗೆದು ಸಂವಿಧಾನ ನೀಡಿರುವ ಪ್ರತಿಮೆ ತಯಾರಿಸಿಡಲಾಗಿದೆ.
ದೇಶದಲ್ಲಿ ಬ್ರಿಟಿಷ್ ಕಾಲದ ಕಾನೂನುಗಳನ್ನು ಇತ್ತೀಚಿಗೆ ಪರಿಶೀಲನೆ ಮಾಡಿ ಭಾರತೀಯ ನ್ಯಾಯ ಸಂಹಿತೆ ಯಾಗಿ ಪರಿವರ್ತಿಸಿರುವದು ಕಾಣಬಹುದು.
ಭಾರತೀಯ ನ್ಯಾಯಾಂಗವು ಹೊಸ ಪರಿಚಯವನ್ನು ಸ್ವೀಕರಿಸುತ್ತಿದೆ.
ನ್ಯಾಯದೇವತೆ ಕಣ್ಣಿಗೆ ಕಟ್ಟಲಾಗಿದ್ದ ಬಟ್ಟೆ ತೆಗೆಯುವ ಮೂಲಕ ಸುಪ್ರೀಂಕೋರ್ಟ್ “ಕಾನೂನು ಇನ್ಮುಂದೆ ಕುರುಡಲ್ಲ” ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಈ ಉಪಕ್ರಮದ ನೇತೃತ್ವ ವಹಿಸಿದ್ದಾರೆ, ಭಾರತೀಯ ನ್ಯಾಯದ ವಿಕಸನದ ಸ್ವರೂಪವನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ.
ಹೊಸ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದೆ, ನ್ಯಾಯಾಂಗವು ತನ್ನ ವಸಾಹತುಶಾಹಿ ಗತಕಾಲದಿಂದ ವಿಘಟನೆಯನ್ನು ಸಂಕೇತಿಸುತ್ತದೆ.