ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಭೇಟಿ, ಪರಿಶೀಲನೆ
ವೈದ್ಯರ ಕೊರತೆ, ಮೂಲಭೂತ ಸೌರ‍್ಯ ಸಮಸ್ಯೆಗಳನ್ನು ಪರಿಹರಿಸಲಾವುದು : ಡಾ. ನಾಗಲಕ್ಷ್ಮೀ ಭರವಸೆ
ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಭೇಟಿ, ಪರಿಶೀಲನೆ
ವೈದ್ಯರ ಕೊರತೆ, ಮೂಲಭೂತ ಸೌರ‍್ಯ ಸಮಸ್ಯೆಗಳನ್ನು ಪರಿಹರಿಸಲಾವುದು : ಡಾ. ನಾಗಲಕ್ಷ್ಮೀ ಭರವಸೆ
ಯಾದಗಿರಿ- ಮಹಿಳೆಯರ ಸಮಸ್ಯೆ, ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ವೃದ್ದಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆ ಮತ್ತು ಮೂಲಭೂತ ಸೌರ‍್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಆಲಿಸಲಾಗಿದ್ದು, ಜಿಲ್ಲಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ರ‍್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ಡಾ. ನಾಗಲಕ್ಷ್ಮೀ ಚೌದ್ರಿ ಅವರು ಹೇಳಿದರು.
ಸುರಪುರ ಸರ‍್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸುರಪುರ ಸರ‍್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ ಕನಿಷ್ಠ ೧೫ ಸಾವಿರ ಹೊರ ರೋಗಿಗಳು ದಾಖಲಾಗುತ್ತಾರೆ. ಆದರೆ ೪ ಜನ ಮಾತ್ರ ವೈದ್ಯರು ಇದ್ದು, ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಸಮಸ್ಯೆ ಆಗುತ್ತಿದೆ. ಮೂಲಭೂತ ಸೌರ‍್ಯ ಸೇರಿದಂತೆ ಹಲವು ಮಾಹಿತಿಯನ್ನು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಹರಿಸಲಾಗುವುದು. ಮುಂದಿನ ಹಂತದ ಸಮಸ್ಯೆಗಳಿಗೆ ಸಚಿವರಿಗೆ ಹಾಗೂ ಪ್ರಧಾನ ಕರ‍್ಯರ‍್ಶಿ ಅವರಿಗೆ ವರದಿ ಸಲ್ಲಿಸಿ ವೈದ್ಯರ ಕೊರತೆ ನೀಗಿಸಲು ಪ್ರಯತ್ನ ಪಡುತ್ತೇನೆ ಎಂದು ಭರವಸೆ ನೀಡಿದರು.
ಹೊರ ರೋಗಿಗಳ ಕೋಣೆ, ಶಸ್ತ್ರ ಚಿಕಿತ್ಸಾ ಘಟಕ, ಪ್ರಸವೋತ್ತರ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ರೋಗಿಗಳ ಸಮಸ್ಯೆಗಳನ್ನು ತಿಳಿದು ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದರು.
ಬೋನಾಳ ಗ್ರಾಮದ ನೀಲಮ್ಮ ಮಹಿಳೆಗೆ ವೃದ್ದಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ ನಮಗೆ ಎಂಬ ಕೋರಿಕೆ ಆಲಿಸಿ ಸ್ಥಳದಲ್ಲಿದ್ದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ ಅವರು, ಪತಿ ಮತ್ತು ಪತಿಯ ಮನೆಯವರು ಮಾನಸಿಕ ಹಿಂಸೆ, ಜೀವ ಬೆದರಿಕೆ, ವರದಕ್ಷಣೆ ಕಿರುಕುಳಕ್ಕೆ ಸಂಬಂಧಿಸಿದಂತ ಮಹಿಳೆಯರ ಸಮಸ್ಯೆಗಳ ಮನವಿಯನ್ನು ಆಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು, ಕ್ರಮಕ್ಕೆ ಮಣಿಯದ ಸಮಸ್ಯೆಗಳಿಗೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
೨ ದಿನಗಳ ಭೇಟಿಯಲ್ಲಿ ೧೫ ಕ್ಕೂ ಹೆಚ್ಚು ಮಹಿಳೆಯರ ಮನವಿ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮಹಿಳೆಯರಿಗೆ ರಕ್ಷಣೆ ನೀಡಿ, ಅವರ ಸಮಸ್ಯೆ ಆಲಿಸಿ ಪರಿಹಾರ ನೀಡುವಂತಿದ್ದರೆ ನೀಡಲಾಗುವುದು ಇಲ್ಲದಿದ್ದರೆ ೧೫ ದಿನಗಳಲ್ಲಿ ಸಂಬಂಧಿಸಿದ ವರದಿ ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಸುರಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆಸಿದ ಮಹಿಳೆಯರ ಸಂವಾದ ಕರ‍್ಯಕ್ರಮದಲ್ಲಿ ಕಂದಾಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕೆ.ಎಸ್.ಆರ್.ಟಿ.ಸಿ ಇಲಾಖೆ, ಕರ‍್ಮಿಕ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಮನವಿ ಸ್ವೀಕರಿಸಿ ಕೆಲವು ಸ್ಥಳದಲ್ಲೇ ಪರಿಹರಿಸಿದರು.
ಮುಂದಿನ ನವೆಂಬರ್ ೦೫ ರಂದು ತಹಸೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕರ‍್ಯನರ‍್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆ ನಡೆಸಿ ಗ್ರಾಮದ ಸಮಸ್ಯೆಗಳ ಮನವಿ ಲಿಖಿತ ರೂಪದಲ್ಲಿ ಪಡೆದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು.
ಇದೇ ಸಂರ‍್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಣಗೌಡ ಎಸ್. ಪಾಟೀಲ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವಿರಣ್ಣಗೌಡ ಪಾಟೀಲ್, ತಹಸೀಲ್ದಾರ್ ರ‍್ಗಾವಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಲಿಂ, ಹಿಂದುಳಿದ ರ‍್ಗಗಳ ಕಲ್ಯಾಣಾಧಿಕಾರಿ ತಿಪ್ಪಾರೆಡ್ಡಿ, ಶಿಶು ಅಭಿವೃದ್ಧಿ ಅಧಿಕಾರಿ ಅನಿಲ್ ಕಾಂಬ್ಳೆ, ಪೊಲೀಸ್ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಆರ್. ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.