ಮಹಿಳಾ ಸಮ್ಮಾನ್ ಯೋಜನೆ: ಈ ಯೋಜನೆಯಲ್ಲಿ 1 ಲಕ್ಷ ಹಣ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ..?
ಇದು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಯೋಜನೆಯಾಗಿದೆ. ಅಂಚೆ ಕಚೇರಿಯಲ್ಲಿ ಲಭ್ಯವಿದ್ದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳಿಗೆ ವಿಸ್ತರಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ರೂಪಿಸಲಾಗಿದೆ.
ಯಾವ ಖಾಸಗಿ ಬ್ಯಾಂಕ್ ಗಳಲ್ಲಿ ಲಭ್ಯ? ಈಗ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಖಾತೆಯನ್ನು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ಗಳಲ್ಲಿ ಕೂಡ ತೆರೆಯಬಹುದಾಗಿ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಹಾಗೆಯೇ ಈ ಬ್ಯಾಂಕ್ ಗಳು ತಮ್ಮ ಶಾಖೆಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆಗಳನ್ನು ತೆರೆಯಲು ಅವಕಾಶ ನೀಡುವ ಮುನ್ನ ಕೆಲವೊಂದು ಅವಶ್ಯಕತೆಗಳನ್ನು ಪೂರೈಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ಬ್ಯಾಂಕ್ ಗಳು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ನಿರ್ವಹಿಸಲು ಅಧಿಕಾರ ಹೊಂದಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಏನಿದು ಮಹಿಳಾ ಸಮ್ಮಾನ ಉಳಿತಾಯ ಪತ್ರ? ಮಹಿಳಾ ಸಮ್ಮಾನ ಉಳಿತಾಯ ಪತ್ರ ಯೋಜನೆಯನ್ನು 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ನೂತನ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಬಾರಿಗೆ 2ಲಕ್ಷ ರೂ. ಹೂಡಿಕೆ ಮಾಡಬಹುದು. ಇದು ಎರಡು ವರ್ಷಗಳ ಅವಧಿಯ ಯೋಜನೆಯಾಗಿದ್ದು, 2025ರ ಮಾರ್ಚ್ ತನಕ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ.
ಬಡ್ಡಿದರ ಎಷ್ಟಿದೆ? ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಮಾಡಿದ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಬಡ್ಡಿದರವನ್ನು ತ್ರೈಮಾಸಿಕವಾಗಿ ಜಮೆ ಮಾಡಲಾಗುತ್ತದೆ. ಇನ್ನು ಇದರಲ್ಲಿ ಶೇ.40ರಷ್ಟು ಭಾಗಶಃ ವಿತ್ ಡ್ರಾ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ, ಈ ಯೋಜನೆಯು ಬ್ಯಾಂಕ್ ಸ್ಥಿರ ಠೇವಣಿ ಮತ್ತು ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರು, ಹಿರಿಯ ನಾಗರಿಕರ ಯೋಜನೆಯಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.
ಹಿರಿಯ ನಾಗರಿಕರ ಯೋಜನೆಯಲ್ಲಿ 8.2 ಶೇಕಡಾ ಬಡ್ಡಿ ಲಭ್ಯವಿದೆ ಆದಾಗ್ಯೂ, ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮುಕ್ತಾಯ ಅವಧಿಯು 5 ವರ್ಷಗಳು. ಪ್ರಸ್ತುತ, ಈ ಯೋಜನೆಯು ಬ್ಯಾಂಕ್ ಸ್ಥಿರ ಠೇವಣಿ ಮತ್ತು ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರು, ಹಿರಿಯ ನಾಗರಿಕರ ಯೋಜನೆಯಡಿಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರ ಯೋಜನೆಯಲ್ಲಿ 8.2 ಶೇಕಡಾ ಬಡ್ಡಿ ಲಭ್ಯವಿದೆ ಆದಾಗ್ಯೂ, ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮುಕ್ತಾಯ ಅವಧಿಯು 5 ವರ್ಷಗಳು. ಇಲ್ಲಿ ನೀವು 2 ವರ್ಷಗಳವರೆಗೆ ಹೂಡಿಕೆ ಮಾಡಬೇಕು. 7.5ರಷ್ಟು ಬಡ್ಡಿ ಸಿಗಲಿದೆ. ಆದರೆ ಒಂದು ವರ್ಷದ ಹೂಡಿಕೆಯ ನಂತರ ನೀವು ಶೇಕಡಾ 40 ರಷ್ಟು ಹಿಂಪಡೆಯಬಹುದು.
ಕನಿಷ್ಠ ಠೇವಣಿ ಎಷ್ಟು? ಈ ಯೋಜನೆಯಡಿಯಲ್ಲಿ 1,000ರೂ. ಕನಿಷ್ಠ ಠೇವಣಿಯಿಡೋದು ಅಗತ್ಯ. ಹಾಗೆಯೇ 2 ಲಕ್ಷ ರೂ. ಗರಿಷ್ಠ ಠೇವಣಿ ಮಿತಿ ವಿಧಿಸಲಾಗಿದೆ. ಈ ಯೋಜನೆಯಡಿ ನೀವು ಒಂದು ಖಾತೆ ತೆರೆದ ಬಳಿಕ ಇನ್ನೊಂದು ಖಾತೆ ತೆರೆಯಲು ಮೂರು ತಿಂಗಳ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸ್ಥಿರ ಠೇವಣಿಗಳಿಗೆ ಪರ್ಯಾಯವಾದ ಉಳಿತಾಯ ಯೋಜನೆಯಾಗಿದೆ. ಬಡ್ಡಿದರ ಕೂಡ ಉತ್ತಮವಾಗಿರುವ ಕಾರಣ ಹೂಡಿಕೆಗೆ ಮಹಿಳೆಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಈ ಯೋಜನೆಯ ಅವಧಿ ಕೂಡ ಕಡಿಮೆಯಿದ್ದು, ಭಾಗಶಃ ವಿತ್ ಡ್ರಾ ಸೌಲಭ್ಯ ಸಹ ಇದೆ.