ಮಾಜಿ ಸಚಿವ ಕಿಡ್ನಾಪ್, ಸ್ವತಃ ಸಚಿವರೇ ಠಾಣೆಗೆ ದೂರು ಸಲ್ಲಿಕೆ
ಮಾಜಿ ಸಚಿವ ಕಿಡ್ನಾಪ್, ಸ್ವತಃ ಸಚಿವರೇ ಠಾಣೆಗೆ ದೂರು ಸಲ್ಲಿಕೆ
ವಿವಿ ಡಿಸ್ಕ್ಃ ಮಾಜಿ ಸಚಿವ ಓರ್ವರನ್ನು 8 ಜನ ದುಷ್ಕರ್ಮಿಗಳು ನ.25 ರಂದು ಅವರ ಕಾರು ಅಡ್ಡಗಟ್ಟಿ ಖಾರದ ಪುಡಿ ಎರಚಿ ಲಾಂಗ್ ತೋರಿಸಿ ಅವರ ಕಾರ್ ಚಾಲಕ ಸಮೇತ ಕಿಡ್ನಾಪ್ ಮಾಡಿರುವ ಪ್ರಕರಣ ತಡವಾಗಿ ತಿಳಿದು ಬಂದಿದೆ.
ಮಾಜಿ ಸಚಿವ ವರ್ತೂರ ಪ್ರಕಾಶ ಮತ್ತು ಅವರ ಕಾರು ಚಾಲಕ ಸುನೀಲ್ ಅವರನ್ನೆ ಕಿಡ್ನಾಪರ್ಸ್ ಅಪಹರಿಸಿ -3-4 ದಿನ 30 ಕೋಟಿ ಹಣ ಬೇಡಿಕೆ ಇಟ್ಟು ಹಿಂಸೆ ನೀಡಿದ್ದಾರೆ ಎಂದು ಸ್ವತಃ ಮಾಜಿ ಸಚಿವ ಇಂದು ಬೆಳ್ಳಂದೂರು ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ವರ್ತೂರ ಪ್ರಕಾಶ, 8 ಜನ ದುಷ್ಕರ್ಮಿಗಳು ತನ್ನ ಹಾಗೂ ಚಾಲಕನ ಸಮೇತ ಕಾರು ಅಡ್ಡಗಟ್ಟಿ ಅಪಹರಿಸಿದ್ದು, ದುಡ್ಡಿಗಾಗಿ ಪೀಡಿಸಿದ್ದು ಚಾಲಕನ ಮೇಲೆ ರಾಡ್ ನಿಂದ ತೀವ್ರ ಹಲ್ಲೆ ನಡೆಸಿದ್ದು, ಈ ವೇಳೆ ಚಾಲಕ ಮೂರ್ಚೆ ಹೋಗಿದ್ದಾನೆ.
ವರ್ತೂರ ಪ್ರಕಾಶ ನಯಾಜ್ ಎಂಬುವರಿಂದ 48 ಲಕ್ಷ ತರಿಸಿ ಕೊಟ್ಟಿದ್ದಾರೆ. ಆದ್ಯಾಗ್ಯು ಇನ್ನು ದುಡ್ಡು ಬೇಕೆಂದು ಹಿಂಸಿಸ ತೊಡಗಿದ ಅಪಹರಣಕಾರರು ಚಾಲಕ ಸುನೀಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ನ.27 ರಂದು ಚಾಲಕ ಸುನೀಲ್ ದುಷ್ಕರ್ಮಿ ಕೈಗಳಿಂದ ಅದ್ಹೇಗೋ ತಪ್ಪಿಸಿಕೊಂಡಿದ್ದಾನೆ. ತಕ್ಷಣಕ್ಕೆ ಗಾಬರಿಗೊಂಡ ಕಿಡ್ನಾಪರ್ಸ್ ಚಾಲಕ ಪೊಲೀಸರಿಗೆ ದೂರು ಸಲ್ಲಿಸಬಹುದೆಂಬ ಭಯದಿಂದ ಅಪಹರಣಕಾರರು ಪ್ರಕಾಶ ಅವರನ್ನು ನಗರ ಸಮೀಪ ತಂದು ದೂರು ಸಲ್ಲಿಸಿದರೆ, ನಿನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಪ್ರಕಾಶರನ್ನು ಮಾರ್ಗ ಮಧ್ಯಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ನಂತರ ವರ್ತೂರ ಪ್ರಕಾಶ, ಚಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದು, ಇಂದು ಠಾಣೆಗೆ ದೂರು ನೀಡಿದ್ದಾರೆ.
ಆದರೆ ಈ ಪ್ರಕರಣದ ಸತ್ಯಾಸತ್ಯಹೊರ ಬರಲು ಪೊಲೀಸರ ತನಿಖೆ ಅಗತ್ಯವಿದೆ. ಇಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಣ್ಣ ಅಪಘಾತ ಆಗಿದೆ ಎಂದು ಚಾಲಕ ಹೇಳಿ ಚಿಕಿತ್ಸೆ ಪಡೆದಿದ್ದಾನೆ ಎನ್ನಲಾಗಿದೆ.
ಆದರೆ ಇದೀಗ ಈ ಪ್ರಕರಣದ ತನೆಖೆ ಚುರುಕುಗೊಳ್ಳುತ್ತಿದ್ದಂತೆ ಒಂದೊಂದೇ ಸತ್ಯಾಂಶ ಹೊರ ಬೀಳುತ್ತಿವೆ. ಹೀಗಾಗಿ ಈ ಪ್ರಕರಣದ ಅಸಲಿ ಸತ್ಯಾಂಶ ಹೊರ ಬರಬೇಕಾದರೆ ಪೊಲೀಸರ ತನಿಖೆ ಚುರುಕುಗೊಳ್ಳಬೇಕಿದೆ. ಈ ಪ್ರಕರಣದಡಿ ಹಲವಾರು ಉಹಾಪೋಹಗಳು ಹುಟ್ಟಿಕೊಳ್ಳುತ್ತಿದ್ದು, ಪೊಲೀಸರಿಂದಲೇ ಸತ್ಯಾಂಶ ಹೊರಬರಬೇಕಿದೆ ಅಷ್ಟೇ.