ಪ್ರಮುಖ ಸುದ್ದಿ

ತ್ರಿವಳಿ ತಲಾಖ್ ಅಂಗೀಕಾರ : ಪ್ರತಿಪಕ್ಷಗಳಿಂದ ತೀವ್ರ ವಿರೋಧ

ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೇ ಇಂದು ಲೋಕಸಭೆಯಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್​ ಇಂದು ಬೆಳಗ್ಗೆ ಮತ್ತೊಮ್ಮೆ ತ್ರಿವಳಿ ತಲಾಖ್​ ಮಸೂದೆ ಮಂಡಿಸಿದರು. ಮಸೂದೆ ಪರ ಹಾಗೂ ವಿರೋಧಗಳ ಸಂಬಂಧ ತೀವ್ರ ಚರ್ಚೆಗಳಿಗೆ ಕಲಾಪ ಸಾಕ್ಷಿಯಾಯಿತು.

ಕಾಂಗ್ರೆಸ್ ನ​ ಅಭಿಷೇಕ್ ಮನು ಸಿಂಘ್ವಿ ಮತ್ತು ತೃಣಮೂಲ ಕಾಂಗ್ರೆಸ್​ನ ಡೆರೆಕ್ ಓ ತ್ರಿವಳಿ ತಲಾಖೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, 20 ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಜಾರಿಯಲ್ಲಿದೆ. ಈ ಮಸೂದೆ ಧರ್ಮಾಧಾರಿತ ಅಲ್ಲ ಎಂದು ಸಚಿವ ರವಿಂಶಕರ್ ಪ್ರಸಾದ್ ವಾದಿಸಿದರು.  ಕೊನೆಗೆ ಎನ್​ಡಿಎ ಒಕ್ಕೂಟ ಮಸೂದೆಯನ್ನ ವೋಟಿಗೆ ಹಾಕಿತು. ಆದರೆ ಈ ವೇಳೆ ತ್ರಿವಳಿ ತಲಾಖ್ ಮಸೂದೆ ವಿರೋಧಿಸಿದ್ದ ಕಾಂಗ್ರೆಸ್​, ತೃಣಮೂಲಕ ಕಾಂಗ್ರೆಸ್​ ಹಾಗೂ ಜೆಡಿಎಯು ಸಂಸದರು ಹೊರನಡೆದರು.

Related Articles

Leave a Reply

Your email address will not be published. Required fields are marked *

Back to top button