ಪ್ರಮುಖ ಸುದ್ದಿ
ರಾಜ್ಯಸಭಾ 4 ಸ್ಥಾನಗಳಿಗೆ ಅವಿರೋಧ ಆಯ್ಕೆ
ರಾಜ್ಯಸಭಾ 4 ಸ್ಥಾನಗಳಿಗೆ ಅವಿರೋಧ ಆಯ್ಕೆ
ಬೆಂಗಳೂರಃ ರಾಜ್ಯಸಭಾ ಸದಸ್ಯರ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ ನಿಂದ ಒಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಸಂಖ್ಯೆಗೆ ಅನುಗುಣವಾಗಿ ಗೆಲ್ಲಲು ಸಾಧ್ಯವಿರುವ ಎರಡು ಸ್ಥಾನಗಳಿಗೆ ಸಾಮಾನ್ಯ ಕಾರ್ಯಕರ್ತರನ್ನು ನೇಮಿಸುವಲ್ಲಿ ಯಶಸ್ವಿಯಾಗಿದೆ.
ಒರ್ವರು ರಾಯಚೂರಿನ ಅಶೋಕ ಗಸ್ತಿ, ಇನ್ನೋರ್ವ ಬೆಳಗಾವಿಯ ಈರಣ್ಣ ಕಡಾಡಿ ಮತ್ತು ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ವಾಪಸ್ ಪಡೆಯುವ ಅವಧಿ ಶುಕ್ರವಾರ ಸಂಜೆ ನಿಗದಿತ ಅವಧಿ ಮುಗಿಯುತ್ತಿದ್ದಂತೆ, ತಲಾ ಒಂದು ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವ ಕಾರಣ, ಪ್ರತಿಸ್ಪರ್ತಿ ನಾಮಪತ್ರ ಸಲ್ಲಿಕೆ ಯಾಗದ ಅನ್ವಯ ಸುಲಭವಾಗಿ ಅವಿರೋಧ ಆಯ್ಕೆ ಜರುಗಿತು.