ಪ್ರಮುಖ ಸುದ್ದಿ
ಹಜ್ ಯಾತ್ರೆಗೆ ಬಂದರು ವ್ಯವಸ್ಥೆ!
ಸೌದಿ ಅರೇಬಿಯ : ಸಮುದ್ರ ಯಾನದ ಮೂಲಕ ಬರುವ ಯಾತ್ರಿಕರನ್ನು ಜಿದ್ದಾ ಇಸ್ಲಾಮಿಕ್ ಬಂದರಿನ ಮೂಲಕ ಸ್ವಾಗತಿಸಲು ಈ ವರ್ಷ ಸೌದಿ ಬಂದರುಗಳ ಪ್ರಾಧಿಕಾರ ವಿಶೇಷ ಯೋಜನೆ ರೂಪಿಸಿದೆ. ಸೌದಿ ಅರೇಬಿಯಾ ಪ್ರವೇಶದಿಂದ ಹಿಡಿದು ವಾಪಸ್ ಆಗುವವರೆಗಿನ ಯೋಗಕ್ಷೇಮವನ್ನು ಪ್ರಾಧಿಕಾರವೇ ನೋಡಿಕೊಂದು ಹಜ್ ಯಾತ್ರೆಯನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.
ಬಂದರಿನ ಮೂಲಕವೇ ಜುಲೈ 17ರಿಂದ ಆಗಸ್ಟ್ 6ರವರೆಗೆ ಈ ಬಾರಿ ಸುಮಾರು 22,000 ಹಜ್ ಯಾತ್ರಿಕರು ಆಗಮಿಸುವ ನಿರೀಕ್ಷೆ ಇದ್ದು ಸುಮಾರು 266 ಸಿಬ್ಬಂದಿಯನ್ನು ಯಾತ್ರಿಕರ ಸೇವೆಗಾಗಿ ನೇಮಿಸಲಾಗಿದೆ. ಕಳೆದ ವರ್ಷ 16,000 ಮಂದಿ ಬಂದರಿನ ಮೂಲಕ ಹಜ್ ಯಾತ್ರೆಗೆ ತೆರಳಿದ್ದರು.
ಗಂಟೆಗೆ 800ಕ್ಕೂ ಅಧಿಕ ಮಂದಿಯನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಬಂದರಿನ ಟರ್ಮಿನಲ್‌ನ್ನು ಸಿದ್ಧಪಡಿಸಲಾಗಿದೆ. ಟರ್ಮಿನಲ್‌ನಲ್ಲಿ ಐದು ಲಾಂಜ್‌ಗಳಿದ್ದು, ಮೂರು ಲಾಂಜ್‌ಗಳು ಆಗಮನಕ್ಕಾಗಿ ಹಾಗೂ ಎರಡು ಲಾಂಜ್‌ಗಳು ನಿರ್ಗಮನಕ್ಕಾಗಿ ಬಳಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.