ಹಾಲಿನ ಜೊತೆ ಅರಿಶಿನ ಬೆರೆಸಿ ಕುಡಿದ್ರೆ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಮಳೆಗಾಲ ಶುರುವಾಯ್ತು ಅಂದರೆ ಸಾಕು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ರೋಗಗಳುಯಾರನ್ನು ಬಿಡಲ್ಲ ಅದಕ್ಕಾಗಿ ದಿನಾ ಏನಾದರೂ ಮಾಡಿದರೂ ಕಡಿಮೆಯೆ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದರ ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ.
ರಕ್ತವನ್ನು ಶುದ್ಧೀಕರಿಸುತ್ತದೆ ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಲ್ಲಾ ಕಲ್ಮಶಗಳಿಂದ ರಕ್ತನಾಳಗಳು ಮತ್ತು ದುಗ್ಧರಸ ವ್ಯವಸ್ಥೆ(ಲಿಂಫ್ಯಾಟಿಕ್ ಸಿಸ್ಟಮ್)ಯನ್ನು ಶುದ್ಧಗೊಳಿಸುತ್ತದೆ. ಕ್ಯಾನ್ಸರ್ ತಡೆಗಟ್ಟುತ್ತದೆ ಅರಿಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು. ಅರಿಶಿನದಲ್ಲಿರುವ ‘ಕರ್ಕ್ಯುಮಿನ್ ‘ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಅರಿಶಿನದ ಹಾಲು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹುಣ್ಣು ಮತ್ತು ಅತಿಸಾರವನ್ನು ತಡೆಯುತ್ತದೆ. ಹೊಟ್ಟೆಯುಬ್ಬರ , ಎದೆಯುರಿ, ಇತರ ಜಠರಗರುಳಿನ ಸೋಂಕುಗಳಿದ್ದರೆ ಪ್ರತಿದಿನ ಅರಿಶಿನವನ್ನು ಒಂದು ಕಪ್ ಹಾಲಿಗೆ ಸೇರಿಸಿ ಕುಡಿಯಿರಿ. ಸಮಯಕ್ಕೆ ಸರಿಯಾಗಿ ಋತುಚಕ್ರ ಅರಿಶಿನದ ಹಾಲು ಕುಡಿಯುತ್ತಿದ್ದರೆ ಮುಟ್ಟಿನ ನೋವು ಶಮನಗೊಂಡು, ಋತುಚಕ್ರ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜೊತೆಗೆ, ಲ್ಯುಕೋರಿಯಾ, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್ಸ್ ಮತ್ತು ಹಾರ್ಮೋನುಗಳಲ್ಲಿ ಅಸಮತೋಲನ ಹೊಂದಿರುವ ಮಹಿಳೆಯರಿಗೂ ಅರಿಶಿನ ಹಾಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕೆಮ್ಮು ಮತ್ತು ಶೀತಕ್ಕೆ ಪರಿಹಾರ ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ಗಂಟಲು ನೋಯುತ್ತಿದ್ದರೆ ಅರಿಶಿನ ಹಾಲನ್ನು ಕುಡಿಯಿರಿ. ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ ಅರಿಶಿನದ ಹಾಲು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಬ್ರಾಂಕೈಟಿಸ್ಗೆ ಪರಿಣಾಮಕಾರಿ ಪರಿಹಾರವಾಗಿದೆ.
ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದರೂ ಪರಿಹಾರ ನೀಡುತ್ತದೆ. ತೂಕ ಕಡಿಮೆಯಾಗುತ್ತದೆ ಹೌದು, ಅರಿಶಿನ ಹಾಲು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ! ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸರಿಯಾಗಿ ನಿದ್ರೆ ಬರಲು ನಿದ್ರೆ ಸರಿಯಾಗಿ ಬರದಿದ್ದರೆ ಅರಿಶಿನ ಹಾಲು ಕುಡಿಯಿರಿ. ಮಲಗುವ ಮೊದಲು ಅರಿಶಿನ ಹಾಲು ಕುಡಿದರೆ ವಿಶ್ರಾಂತಿ ಸಿಗುತ್ತದೆ. ಮನಸ್ಸು ಶಾಂತಗೊಂಡು ನಿದ್ರೆ ಬರುತ್ತದೆ. ಕೀಲು ನೋವು ನಿವಾರಣೆ ಅರಿಶಿನವನ್ನು ಆಯುರ್ವೇದದಲ್ಲಿ ‘ನೈಸರ್ಗಿಕ ಆಸ್ಪಿರಿನ್’ಎಂದು ಕರೆಯುತ್ತಾರೆ. ಇದು ಎಲ್ಲಾ ರೀತಿಯ ನೋವನ್ನು ನಿವಾರಿಸುತ್ತದೆ. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ.
ಈ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಬರುವುದನ್ನು ತಪ್ಪಿಸಬಹುದು. ಚರ್ಮಕ್ಕೆ ಹೊಳಪು ನೀಡುತ್ತದೆ ಅರಿಶಿನದ ಹಾಲು ಮೊಡವೆ, ಎಸ್ಜಿಮಾ, ಇತರ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಚರ್ಮದಲ್ಲಿ ಮೂಡಿರುವ ಸುಕ್ಕುಗಳನ್ನು ತೆಗೆದು, ನೈಸರ್ಗಿಕವಾಗಿ ಹೊಳೆಯಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಅರಿಶಿನ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಅರಿಶಿನದಲ್ಲಿನ ಕರ್ಕ್ಯುಮಿನ್ ಸೈಟೊಕಿನ್ ಗಳ ಬಿಡುಗಡೆ ತಡೆಯುತ್ತದೆ. ಈ ಸೈಟೊಕಿನ್ ಗಳು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿವೆ. ಮಧುಮೇಹ ಚಿಕಿತ್ಸೆಗೆ ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ. ಇದು ಮಧುಮೇಹ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಡಯಾಬಿಟಿಕ್ ನೆಫ್ರೋಪತಿ, ಡಯಾಬಿಟಿಕ್ ರೆಟಿನೋಪತಿ ಚಿಕಿತ್ಸೆಯಲ್ಲಿ ಕರ್ಕ್ಯುಮಿನ್ ಬಳಸಲಾಗುತ್ತದೆ.