ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ಶೇ.60 ರಷ್ಟು ಜಯಃ ಸಿಎಂ ಹರ್ಷ
ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಗೆ ಶೇ.60 ರಷ್ಟು ಜಯಃ ಸಿಎಂ ಹರ್ಷ
ವಿವಿ ಡೆಸ್ಕ್ಃ ರಾಜ್ಯ ವ್ಯಾಪ್ತಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶೇ.60 ರಷ್ಟು ಅಭ್ಯರ್ಥಿಗಳು ವಿಜೇತರಾಗಿದ್ದು ಹರ್ಷ ತಂದಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ವನ್ನು ತೋರಿದೆ ಎಂದರು.
ಅಲ್ಲದೆ ಹೊಸ ವರ್ಷ ಆಚರಣೆಗೆ ಕೋವಿಡ್ ನಿಯಮ ಪಾಲನೆ ಅಗತ್ಯವಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಕೊರೊನಾ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ.
ಸೋಂಕು ತಡೆಗಟ್ಟಲು ಹಲವು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಹೊಸವರ್ಷ ಅಂಗವಾಗಿ ಸಾರ್ವಜನಿಕ ವಾಗಿ ಗುಂಪು ಸೇರಲು ಅವಕಾಶ ಇರುವದಿಲ್ಲ. ಹೀಗಾಗಿ ನಿಷೇದಾಜ್ಞೆ ಹೊರಡಿಸಲಾಗಿದೆ. ಸರಳ ಆಚರಣೆಗೆ ಕೆಲವು ಪಬ್, ರೆಸ್ಟೋರೆಂಟ್ ಗಳಲ್ಲಿ ಮುಂಚಿತವಾಗಿ ಬುಕ್ಕಿಂಗ್ ವ್ಯವಸ್ಥೆಗೆ ಸೂಚಿಸಲಾಗಿದೆ. ಎಲ್ಲಡೆ ಬ್ಯಾರಿಕೇಡ್ ಹಾಕಲಾಗುತ್ತಿದೆ. ಈ ಕುರಿತು ಜನರು ಹೊರಗಡೆ ಗುಂಪು ಗುಂಪಾಗಿ ತಿರುಗುವಂತಿಲ್ಲ. ಬೆಂಗಳೂರನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ.
ಬುಕ್ಕಿಂಗ್ ಪತ್ರ ತೆಗೆದುಕೊಂಡಿದ್ದರೆ ಆಯಾ ಸ್ಥಳಕ್ಕೆ ಅವರು ಹೋಗಬಹುದು. ಎಲ್ಲೂ ಗುಂಪು ಸೇರುವದಕ್ಕೆ ಅವಕಾಶ ಇಲ್ಲ. ಉಳಿದಂತೆ ಬಾರ್, ಪಬ್, ಇತರೆ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ಇದ್ರೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ನಾಗರಿಕರು ಸಹಕರಿಸಬೇಕು. ಇಂದು ಮದ್ಯಾಹ್ನದಿಂದಲೇ ಬೆಂಗಳೂರಿನಲ್ಲಿ 144 ಜಾರಿಗೊಳಿಸಲಾಗಿದೆ ಎಂದರು.