ಶಿವನೊಲಮೆಗೆ ಭಕ್ತಿಯೇ ಪ್ರಧಾನಃ ದಿಗ್ಗಾಂವಶ್ರೀ
ಭಕ್ತರಿಂದ ದಿಗ್ಗಾಂವ ಶ್ರೀಗಳ ತುಲಾಭಾರ…
ಗಾಜರಕೋಟದಲ್ಲಿ ಅದ್ಧೂರಿ ರಥೋತ್ಸವ
ಯಾದಗಿರಿಃ ತಾಲೂಕಿನ ಗಾಜರಕೋಟ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ರಥೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ 6 ಕ್ಕೆ ವೇದ ಘೋಷಗಳೊಂದಿಗೆ ಮಲ್ಲಿಕಾರ್ಜುನ ಲಿಂಗಕ್ಕೆ ವಿಶೇಷ ಪೂಜಾ ಮತ್ತು ಸಹಸ್ರ ಬಿಲ್ವಾರ್ಚಾನೆ ಜರುಗಿತು.
ನಂತರ ಶ್ರೀ ದೇವರ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ, ಶಿವಜ್ಯೋತಿಯು ಭಾಜಾ ಭಜಂತ್ರಿ, ಕುಂಭ ಕಲಶÀದೊಂದಿಗೆ ಮತ್ತು ಪುರುವಂತರ ಕುಣಿತದೊಂದಿಗೆ ರಾಚಪ್ಪಯ್ಯನ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.
ಸಂಜೆ 6 ಗಂಟೆಗೆ ದಿಗ್ಗಾಂವ್ ಶ್ರೀಮಠದ ಶ್ರೀ ಸಿದ್ಧವೀರ ಶಿವಾಚಾರ್ಯರರ ನೇತೃತ್ವದಲ್ಲಿ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಅತ್ಯಂತ ಭಕ್ತಿ ಶ್ರದ್ಧೆಯಿಂದ ರಥಕ್ಕೆ ಉತ್ತುತ್ತಿ, ಬಾಳೆಹಣ್ಣು, ಕಬ್ಬು, ಹೂಗಳನ್ನು ಅರ್ಪಿಸಿ ಪುನೀತಗೊಂಡರು. ಮಲ್ಲಿಕಾರ್ಜುನ ಮಹಾರಾಜಕೀ ಜೈ ಎಂಬ ಜಯಘೋಷ ಮುಗಿಲುಮುಟ್ಟಿತು.
ರಥೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮ ಸಭೆಯಲ್ಲಿ ಭಕ್ತಾಧಿಗಳಿಂದ ಶ್ರೀಗಳ ತುಲಾಭಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶಿವ ಎಂದರೆ ಮಂಗಳಕರ, ಶುಭಕರವಾದದು. ವರ್ಷಕ್ಕೊಮ್ಮೆ ಆಚರಿಸುವ ಶಿವ ಜಾಗರಣೆಯು ದೈವಿ ಶಕ್ತಿಯ ಜಾಗೃತಿಯ ಸಂಕೇತವಾಗಿದೆ.
ನಾವು ಬದುಕನ್ನು ಶಿವ ನಾಮಸ್ಮರಣೆಯೊಂದಿಗೆ ಜಾಗೂರೂಕತೆಯಿಂದ ನಡೆಸಿಕೊಂಡು ಹೋಗಬೇಕು. ಶಿವನೊಲುಮೆಗೆ ಭಕ್ತಿಯೇ ಪ್ರಧಾನವಾಗಿದೆ, ಶಿವ ಭಕ್ತಾಧೀನನಾಗಿದ್ದಾನೆ. ನಾವೆಲ್ಲ ಶಿವ ನಾಮಸ್ಮರಣೆಯಿಂದ ಬದುಕನ್ನು ಪಾವನಗೊಳಿಸೋಣ ಎಂದು ಹೇಳಿದರು. ಮುಖಂಡರು, ಶಿವ ಮಾಲಾಧಾರಿಗಳು ಹಾಗೂ ಗ್ರಾಮದ ಹಾಗೂ ಸುತ್ತಲಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.