RSS ನ್ನು ದೂಷಿಸುವದು ಕೆಲವರಿಗೆ ಚಾಳಿಯಾಗಿದೆ – ಪಾಟೀಲ್ ಟ್ವಿಟ್
ವಿವಿ ಡೆಸ್ಕ್ಃ ಆರ್.ಎಸ್.ಎಸ್.ನ್ನು ದೂಷಿಸುವದು ಕೆಲ ರಾಜಕಾರಣಿಗಳಿಗೆ ಚಾಳಿ ಬಿದ್ದಿದೆ. ಉಪ ಚುನಾವಣೆ ಬೇರೆ ಘೊಷಣೆಯಾಗಿದ್ದರಿಂದ ಮಾಜಿ ಸಿಎಂ ಕುಮಾರಸ್ವಾಮಿಯವರು ಅದೇ ಚಾಳಿ ಮುಂದುವರೆಸಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಟ್ವಿಟ್ ಮೂಲಕ ಛಾಟಿ ಬೀಸಿದ್ದಾರೆ.
ಆರ್.ಎಸ್.ಎಸ್. ಕೋಟ್ಯಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆ ಹೊರತು ಎಂದಿಗೂ ವಂಶಪರಂಪರೆಯ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ ಎಂದು ಕುಟಿಕಿದ್ದಾರೆ.
ಆರ್.ಎಸ್.ಎಸ್. ಈ ದೇಶದ ಅಪ್ರತಿಮ ಸಂಘಟನೆಯಾಗಿದೆ. ಅಲ್ಲದೆ ಕುಮಾರಸ್ವಾಮಿ ಅವರು ಅವರ ತಂದೆ ಮಾಜಿ ಪ್ರಧಾನಿ ದೇವೆಗೌಡರೇ ಹಿಂದ ಆರ್.ಆರ್.ಎಸ್.ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವದು ಮರೆತಂತಿದೆ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.