ಬೆಂಗಳೂರಿನಲ್ಲಿ ಕೊರೊನಾ ಸ್ಪೋಟ, 24 ಗಂಟೆಯಲ್ಲಿ 1,033 ಪ್ರಕರಣ ಪತ್ತೆ
ಸಚಿವ ಬಿ.ಸಿ.ನಾಗೇಶ್ ಗೆ ಕೋವಿಡ್ ದೃಢ
ಕರುನಾಡಿಗೆ ಕೊರೊನಾ ಅಪಾಯ ಮುನ್ಸೂಚನೆ
ಬೆಂಗಳೂರಃ ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,033 ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಪಾಯದ ಕಡೆ ಹೆಜ್ಜೆ ಹಾಕುತ್ತಿದೆ ಎಂದು ಆರೋಗ್ಯ ತಜ್ಞರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನಿನ್ನೆ ಸ್ಪೋಟಗೊಂಡ ಒಟ್ಟು 1,033 ಪ್ರಕರಣಗಳಲ್ಲಿ 810 ಪ್ರಕರಣಗಳು ಬೆಂಗಳೂರ ನಗರ ಜಿಲ್ಲೆಯಲ್ಲಿಯೇ ಪತ್ತೆಯಾಗಿವೆ.
ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 66 ಕ್ಕೆ ಏರಿದೆ. ರಾಜಧಾನಿಗೆ ಕೊರೊನಾ ಕಂಟಕ ಜಾಸ್ತಿಯಾಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಕೊರೊನಾ ಪ್ರಕರಗಳ ಸಂಖ್ಯೆ ಹೆಚ್ವಾಗಿದೆ. ಜ.9 ನೇ ತಾರೀಖಿನೊಳಗೆ ದಿನಕ್ಕೆ 3 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಚಿವ ಬಿ.ಸಿ.ನಾಗೇಶ್ ಗೂ ಕೊರೊನಾ ಸೋಂಕು ದೃಢ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ.
ಶನಿವಾರ ಮಾದರಿ ಪರೀಕ್ಷೆಗೆ ಒಳಪಟ್ಟ ಸಚಿವರಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢವಾಗಿದೆ.
ಸೂಕ್ತ ಚಿಕಿತ್ಸೆಗೆ ಇಳಗಾದ ಅವರು, ಸಂಪರ್ಕದಲ್ಲಿರುವ ಎಲ್ಲರೂ ಪರೀಕ್ಷೆಗೆ ಒಳಗಾಗುವ ಮೂಲಕ ಸಮರ್ಪಕ ಚಿಕಿತ್ಸೆ ಪಡೆಯಬೇಕೆಂದು ಅವರಿ ತಿಳಿಸಿದ್ದಾರೆ.