ಪ್ರಮುಖ ಸುದ್ದಿ
ರಸ್ತೆ ಅಪಘಾತ ಅಂಗನವಾಡಿ ಶಿಕ್ಷಕಿ ಸಾವು
ಬೈಕ್ ಅವಘಡ ಶಿಕ್ಷಕಿ ಸಾವು
ಯಾದಗಿರಿಃ ಕರ್ತವ್ಯ ನಿಮಿತ್ತ ಬೈಕ್ ಮೇಲೆ ಹೊರಟಿದ್ದ ಅಂಗನವಾಡಿ ಶಿಕ್ಷಕಿ ಮಾರ್ಗ ಮಧ್ಯದಲ್ಲಿ ಬೈಕ್ ಅವಘಡ ಸಂಭವಿಸಿ ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಳ್ಳಿಯಿಂದ ಸಗರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಡೆದಿದೆ.
ಹಂಪ್ ದಾಟುವ ವೇಳೆ ಬೈಕ್ ಸ್ಕಿಡ್ ಆಗಿದ್ದು, ಹಿಂಬದಿ ಕುಳಿತಿದ್ದ ಶಾರದಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ನೀಲಮ್ಮ ಗಂಡ ಅಡಿವೆಪ್ಪ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅವರು ಸಗರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಂತು ಹುಳ ಶಿಬಿರಕ್ಕೆ ಬೈಕ್ ಮೇಲೆ ಹೊರಟಿದ್ದರೆನ್ನಲಾಗಿದೆ. ಕಳೆದ 7 ವರ್ಷದಿಂದ ಅವರು ಅಂಗನವಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.