ಪ್ರಮುಖ ಸುದ್ದಿ
ಸೇತುವೆಗೆ ಉರುಳಿದ ಟ್ರ್ಯಾಕ್ಟರ್ ಇಬ್ಬರ ಸಾವು
ಟ್ರ್ಯಾಕ್ಟರ್ ಪಲ್ಟಿ ಇಬ್ಬರು ಕಾರ್ಮಿಕರ ಸಾವು
ಯಾದಗಿರಿಃ ಕೂಲಿ ಕಾರ್ಮಿಕರನ್ನು ತೆಗೆದುಕೊಂಡು ಜಮೀನೊಂದರ ಕೆಲಸಕ್ಕೆ ತೆರಳುತ್ತಿದ್ದ ಟ್ರಾಕ್ಟರ್ ಸೇತುವೆಗೆ ಉರಳಿದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಯಾದಗಿರಿ ತಾಲೂಕಿನ ಬಾಡಿಹಾಳ ಗ್ರಾಮದ ಸಮೀಪ ನಡೆದಿದೆ.
ಲಲಿತಮ್ಮ (45) ಭಾಗ್ಯಲಕ್ಷ್ಮೀ (16) ಇಬ್ಬರು ದುರ್ಘಟನೆಯಲ್ಲಿ ಮೃತ ದುರ್ದೈವಿಗಳಾಗಿದ್ದು, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸೈದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ರಾಕ್ಟರ್ ಸೇತುವೆ ಕೆಳಗೆ ಉರಳಲು ಚಾಲಕನ ನಿಷ್ಕಾಳಜಿಯೇ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.