ಸಂತ ನಾರಾಯಣ ಗುರು ಕೇರಳದ ಬಸವಣ್ಣ-ಹಣಮಂತಿ ಗುತ್ತೇದಾರ
ಸಂತ ನಾರಾಯಣ ಗುರು ಜಯಂತ್ಯುತ್ಸವ
ಯಾದಗಿರಿ, ಶಹಾಪುರಃ ರೋಗಗ್ರಸ್ಥ ಸಮಾಜಕ್ಕೆ ಶಿಕ್ಷಣವೇ ಮದ್ದು ಎಂದು ಅರಿತಿದ್ದ ಬ್ರಹ್ಮಶ್ರೀ ನಾರಾಯಣ ಗುರು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ರಾತ್ರಿ ಶಾಲೆ ಆರಂಭಿಸುವ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಅವರ ಪರಿಶ್ರಮದ ಫಲವೇ ಇಂದು ಇಡಿ ಕೇರಳ ಶೈಕ್ಷಣಿಕವಾಗಿ ಪ್ರಾಶಸ್ತ್ಯ ಹೊಂದಿರಲು ಕಾರಣವಾಗಿದೆ ಎಂದು ಉಪನ್ಯಾಸಕಿ ಹಣಮಂತಿ ಬಿ. ಗುತ್ತೇದಾರ ಅಭಿಪ್ರಾಯಪಟ್ಟರು.
ಇಲ್ಲಿನ ನಗರಸಭೆ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ತಾಲೂಕು ಆಡಳಿತ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಅಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿಯತೆ ತುಂಬಿ ತುಳುಕುತಿದ್ದ ಕಾಲವದು, ಕೀಳು ಜಾತಿಯವರನ್ನು ಸಮೀಪವು ಕರೆದುಕೊಳ್ಳದ ಸ್ಥಿತಿಯಲ್ಲಿ ಮಹಾನ್ ಕ್ರಾಂತಿಕಾರ ಹೆಜ್ಜೆಯನಿಟ್ಟು ಶೋಷಿತರನ್ನು ರಕ್ಷಿಸುವ ಮತತು ಅವರಲ್ಲಿ ದೈರ್ಯ ತುಂಬು ಕೆಲಸ ಮಾಡಿದ ಕೀತಿ ನಾರಾಯಣ ಗುರು ಅವರಿಗೆ ಸಲ್ಲುತ್ತದೆ.
ಶಿಕ್ಷಣಕ್ಕಾಗಿ ಸ್ವಾತಂತ್ರರಾಗಿ ಸಂಘಟನೆಗಾಗಿ ಬಲಿಷ್ಠರಾಗಿ ಎಂದು ಹೇಳುವ ಮೂಲಕ ಕೆಲ ಸಮುದಾಯದ ಜನರನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವಂತೆ ಹುರಿದುಂಬಿಸಿದರು. ಕಲುಷಿತ ಸಮಾಜವನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು.
ಅಂದಿನ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಜೀಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿ ಅಸ್ಪೃಶ್ಯ ನಿವಾರಣೆಗೆ ಸಲಹೆ ಕೇಳಿದರೆ, ಕೇವಲ ತೋರಿಕೆಗೆ ಸಮಾಜದಲ್ಲಿ ಬೇರು ಬಿಟ್ಟಿರುವ ಅಸ್ಪøಶ್ಯ ನಿವಾರಣೆ ಅಸಾಧ್ಯ ಅದು ಪ್ರತಿಯೊಬ್ಬರ ಮನದಿಂದ ತೊಳೆದಾಗ ಮಾತ್ರ ಸಾಧ್ಯವಾಗಲಿದೆ. ಅದಕ್ಕೆ ಮೊದಲು ಕೆಳ ವರ್ಗದವರನ್ನು ಶೈಕ್ಷಣಿಕವಾಗಿ ಬೆಳೆಸಬೇಕಿದೆ. ಆಗ ತನ್ನಿಂದ ತಾನೇ ಅಸ್ಪೃಶ್ಯ ಬೇಧ ಭಾವ ಮೆಳು ಕೀಳೆಂಬುದ ಅಳಿಯಲು ಸುಲಭವೆಂದು ಸಲಹೆ ನೀಡಿದ್ದರಂತೆ.
ಹೀಗೆ 300 ವರ್ಷಗಳ ಹಿಂದಿನ ಮಾತಿದು. ನರಾಯಣ ಗುರು ಕೇರಳವಷ್ಟೆ ಅಲ್ಲದೆ ದೇಶದಾದ್ಯಮತ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸಮಾದಲ್ಲಿನ ಅನಿಷ್ಟ ಪದ್ಧತಿ ಮೂಢ ನಂಬಿಕೆಯಂತಹ ಆಚಾರ ವಿಚಾರಗಳನ್ನು ನೋಡಿ ಜಾಗೃತಿ ಮೂಡಿಸಲು ತೆರಳಿ ಉತ್ಕøಷ್ಟ ಸಮಾಜದವರಿಂದ ಸಾಕಷ್ಟು ನೋವು ಅನುಭವಿಸಿ ಅವರು ಕಾಡು ಮೇಡು ಅಲೆದು ಅರಣ್ಯದಲ್ಲಿ ತಪಸ್ಸು ಧ್ಯಾನಗೈದು ಸಂತರಾದರು.
ಧಾರ್ಮಿಕತೆ ಮೂಲಕ ಸಮಾಜ ಅನಿಷ್ಟತೆಯನ್ನು ಕಿತ್ತೆಸೆಯಲು ಪ್ರಯತ್ನಿಸಿದರು. ಆ ಕಾರಣಕ್ಕೆ ಅವರ 70 ವರ್ಷದ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ಜಗದ್ಧೋದ್ಧಾರಕ ಎಂಬ ಬಿರುದು ನೀಡಲಾಗಿದೆ ಎಂದು ಆತ್ಮಚರಿತ್ರೆಯಲ್ಲಿ ಬರೆದಿದೆ ಎಂದರು.
ಅಲ್ಲದೆ ಕೀಳು ಸಮುದಾಯದವರನ್ನು ದೇವಾಲಯದೊಳಗೆ ಬಿಡುವದಿಲ್ಲವೆಂಬ ನೋವು ಬೇಡ. ನಾವೇ ದೇವಾಲಯವನ್ನು ನಿರ್ಮಿಸೋಣ ಎಂದು ಅವರೇ ಖುದ್ದಾಗಿ ಶಿವ ದೇವಾಲಯ ನಿರ್ಮಾಣ ಮಾಡಿದ್ದರು. ಆಗ ಕಲೆವರು ಕಳವರ್ಗದವರು ಶಿವಲಿಂಗು ಸ್ಥಾಪನೆ ಮಾಡಬಾರದೆಂದು ಕೇಳುವ ಮೂಲಕ ಹೀಯಾಳಿಸಿದರು.
ಆದರೆ, ಅವರು ನಾನು ಲಿಂಗು ಸ್ಥಾಪನೆ ಮಾಡಿರುವುದು ಮಡಿವಂತರಿಗಾಗಿ ಅಲ್ಲ ಮೈಲಿಗೆವಂತರಿಗಾಗಿಯೇ ಮಾಡಿದ್ದೇನೆ. ಇಲ್ಲಿ ಮೈಲಿಗೆವಂತರು ಕೀಳು ಸಮುದಾಯದವರು ಕೆಳ ವರ್ಗದ ಜನರಿಗಾಗಿ ಶಿವ ದೇವಾಲಯ ನಿರ್ಮಿಸಿದ್ದೇನೆ ಎಂದು ಸಮಾಧಾನದಿ ಉತ್ತರ ನೀಡಿದ್ದರು.
ಕೆಳ ಸಮುದಾಯದವರಿಗಾಗಿ ವಾಚನಾಲಯ, ದೆವಾಲಯ ಮತ್ತು ಶಾಲೆಗಳನ್ನು ಕಟ್ಟಬೇಕು. ನಾವೆಲ್ಲ ಶಿಕ್ಷಣವಂತರಾಗಬೇಕು ಎಂದು ಕರೆ ನೀಡುತ್ತಿದ್ದರು. ಅಂದಿನ ಅವರ ಪರಿಶ್ರಮದ ಫಲವೇ ಇಂದು ಇಡಿ ಕೇರಳ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂದಿದೆ. ಹೀಗಾಗಿ ನಾರಾಯಣ ಗುರು ಅವರನ್ನು ಕೇರಳದ ಬಸವಣ್ಣ ಎಂದು ಸಂಬೋಧಿಸಲಾಗುತ್ತಿದೆ ಎಂದು ತಿಳಿಸಿದರು.
ಸಂತೋಷ ಗುತ್ತೇದಾರ ಗೌರವ ಅಧ್ಯಕ್ಷತೆವಹಿಸಿದ್ದರು. ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಠ, ತಹಸೀಲ್ದಾರ ಸಂಗಮೇಶ ಜಿಡಗೆ, ನಗರಸಭೆ ಅಧ್ಯಕ್ಷೆ ಕಾಂತಮ್ಮ ಹಳಿಸಗರ ಮತ್ತು ಪೌರಾಯುಕ್ತ ಬಸವರಾಜ ಶಿವಪೂಜೆ ಉಪಸ್ಥಿತರಿದ್ದರು.
ಕವಿತಾ ಬಡಿಗೇರ ಪ್ರಾರ್ಥನೆ ಗೀತೆ ಹಾಡಿದರು. ಲಿಂಗಣ್ಣಗೌಡ ಸ್ವಾಗತಿಸಿದರು. ಭಾಗಮ್ಮ ನಿರೂಪಿಸಿ ವಂದಿಸಿದರು. ಮುಂಚಿತವಾಗಿ ಸಿಬಿ ಕಮಾನದಿಂದ ನಗರಸಭೆವರೆಗೆ ನಾರಾಯಣ ಗುರು ಅವರ ಭಾವಚಿತ್ರ ಮೆರವಣಿಗೆ ಬೈಕ್ ರ್ಯಾಲಿ ಜರುಗಿತು. ಈಡಿಗ ಸಮಾಜ ಬಾಂಧವರು ಸರ್ಕಾರಿ ನೌಕರರು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.