ಬಯಲು ಹನುಮಾನ್ಃ ಶ್ರಾವಣ ಭಜನೆ ಮಂಗಲೋತ್ಸವ
ಶ್ರಾವಣ ಮಾಸ ಭಜನೆ ಮಂಗಲೋತ್ಸವ
ಬಯಲು ಹನುಮಾನ್ಃ ಶ್ರಾವಣ ಮಂಗಲೋತ್ಸವ
ಯಾದಗಿರಿ, ಶಹಾಪುರಃ ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸ ಅಂಗವಾಗಿ ನಗರದ ಬೆಟ್ಟದಲ್ಲಿರುವ ಬಯಲು ಹನುಮಾನ್ ದೇವರ ಗುಡಿಯಲ್ಲಿ ತಿಂಗಳಿಂದ ನಡೆದ ಭಜನೆ ಮಂಗಲೋತ್ಸವ ಜರುಗಿತು.
ಭಜನಾ ಮಂಗಲ ಅಂಗವಾಗಿ ಬೆಳಗ್ಗೆ ಶ್ರೀದೇವರಿಗೆ ವಿಶೇಷ ಪೂಜೆ ಪುನಸ್ಕಾರ, ಅಭಿಷೇಕ ಜರುಗಿತು. ನಿತ್ಯ ರಾತ್ರಿ ಭಜನೆಯನ್ನು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದ್ದರು.
ಕೊನೆಯ ಶ್ರಾವಣ ಶನಿವಾರ ಅಂಗವಾಗಿ ಭಜನಾ ಮಂಗಲೋತ್ಸವ ಹಮ್ಮಿಕೊಂಡು ಶ್ರಾವಣ ಮಾಸದ ಭಜನೆ ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಹುಗ್ಗಿ, ಅನ್ನ ಸಾಂಬಾರು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಕ್ತಾಧಿಗಳು ಶನಿವಾರ ಬೆಳಗ್ಗೆ 7 ಗಂಟೆಯಿಂದಲೇ ತಂಡೋಪ ತಂಡವಾಗಿ ಆಗಮಿಸಿ ಶ್ರೀದೇವರ ದರ್ಶನ ಪಡೆದು ಪುನೀತಭಾವ ಅರ್ಪಿಸಿದರು. ಕಾಯಿ ಕರ್ಪೂರ, ಹೂಮಾಲೆ ಅರ್ಪಿಸಿ ನಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ಪ್ರಸಾದದ ಜೊತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಸಾವಿರಾರು ಜನ ಮಹಿಳೆಯರು, ಹಿರಿಯರು ಮಕ್ಕಳು ಶ್ರೀದೇವರ ದರ್ಶನ ಪಡೆದು. ಪ್ರಸಾದ ಸೇವಿಸಿದರು. ಬಯಲು ಹನುಮಾನ್ ದೇವರ ಯುವಕರ ಬಳಗ ಸಮರ್ಪಕ ವ್ಯವಸ್ಥೆ ಕಲ್ಪಸುವ ಮೂಲಕ ಸೇವೆ ಸಲ್ಲಿಸಿದರು. ಯುವ ಮುಖಂಡರಾದ ಅಬ್ದುಲ್, ರಾಮು ತಹಸೀಲ್, ಅಯ್ಯಪ್ಪ, ಶ್ರೀಧರ ಗಜ ಸೇರಿದಂತೆ ಇತರರು ಸೇವೆಯಲ್ಲಿ ನಿರತರಾಗಿದ್ದರು.