ಪ್ರಮುಖ ಸುದ್ದಿ
ಸುರಪುರ ಜ್ವಲಂತ ಸಮಸ್ಯೆ ಪರಿಹರಿಸುವೆ-ಶಾಸಕ ರಾಜೂಗೌಡ
ಯಾದಗಿರಿ-ಸುರಪುರ ಬಿಜೆಪಿ ಕಿಲಕಿಲ
ಯಾದಗಿರಿಃ ಜಿಲ್ಲೆಯ ಯಾದಗಿರಿ ಮತ್ತು ಸುರಪುರದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ್ದು, ಇತಿಹಾಸದಲ್ಲಿಯೇ ಮೊದಲಬಾರಿಗೆ ಬಿಜೆಪಿ ನಗರಸಭೆ ಚುಕ್ಕಾಣಿ ಹಿಡಿದಿದೆ.
ಸುರಪುರ ನಗರಸಭೆ ಗೆಲುವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೂ ಮತ್ತು ಮತಬಾಂಧವರಿಗೆ ಅರ್ಪಿಸಿ ಮಾತನಾಡಿದ ಶಾಸಕ ರಾಜೂಗೌಡ, ಚುನಾವಣೆ ವೇಳೆ ನೀಡಿದ ಭರವಸೆಯಂತೆ, ನಗರಸಭೆ ವ್ಯಾಪ್ತಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ಪರಿಹರಿಸಲು ಸಿದ್ಧನಿದ್ದು, ಮೊದಲು ನೀರಿನ ಸಮಸ್ಯೆ ಪರಿಹರಿಸೇ ತೀರುತ್ತೇನೆ.
ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರವಿದೆ ಎಂಬುದನ್ನು ನಗರಸಭೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮತದಾರರು ಆಶೀರ್ವಾದ ಮಾಡಿದ್ದಾರೆ.
ಪ್ರತಿ ಮತದಾರ ಬಂಧು ಕಾರ್ಯಕರ್ತರು ಪಕ್ಷದ ಮುಖಂಡರ ಪಾದಗಳಿಗೆ ವಂದಿಸುವ ಮೂಲಕ ಪಕ್ಷದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.