ಕ್ಯಾಂಪಸ್ ಕಲರವ

ಹೆತ್ತವರ ಕನಸು ಸಾಕಾರಗೊಂಡಲ್ಲಿ ವಿದ್ಯಾರ್ಥಿ ಬದುಕು ಸಾರ್ಥಕ-ದರ್ಶನಾಪುರ

ಡಿಗ್ರಿ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳ ಉದ್ಘಾಟನೆ

ಯಾದಗಿರಿ, ಶಹಾಪುರಃ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಾಮಾಜಿಕ ಶಿಕ್ಷಣವನ್ನು ಅರಿತುಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಪ್ರಸಕ್ತ ಸಾಲಿನ ಸಂಸ್ಕøತಿಕ, ಕ್ರೀಡಾ, ಎನ್ನೆಸ್ಸೆಸ್ಮ ರೆಡ್‍ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುಂದಿನ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು. ಡಿಗ್ರಿ ವಿದ್ಯಾರ್ಥಿಗಳಿಗೆ ಇದು ಬದುಕಿನ ತಿರುವಿನ ಸಂದರ್ಭ. ಇಂತಹ ವೇಳೆ ಕೆಟ್ಟ ಚಟಗಳಿಗೆ ಹರಿಯುವ ಮನಸ್ಸುನ್ನು ನಿಗ್ರಹಿಸಿಕೊಂಡು ಉತ್ತಮ ಚಟುವಟಿಕೆಯಲ್ಲಿ ಭಾಗವಹಿಸಿ ನಿರಂತರ ಶ್ರಮದಿಂದ ಅಭ್ಯಾಸ ಮಾಡಿ ಶೈಕ್ಷಣಿಕವಾಗಿ ಉತ್ತಮ ಬದುಕು ನಿರ್ಮಿಸಿಕೊಂಡಲ್ಲಿ ಮುಂದೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ.

ಇಲ್ಲವಾದಲ್ಲಿ ರಂಗುರಂಗಿನ ದುನಿಯಾದಲ್ಲಿ ಮೈಮರೆತು ಹಾಳು ವ್ಯಸನಕ್ಕೆ ಬಲಿಯಾದರೆ ಜೀವನ ಕತ್ತಲಮಯವಾಗಲಿದೆ. ಹೆತ್ತವರು ಬದುಕಿನುದ್ದಕ್ಕು ಕೊರಗಬೇಕಾಗುತ್ತದೆ. ಕಾರಣ ಕುಟುಂಬ ನಿಭಾಯಿಸುವ ಜವಬ್ದಾರಿ ಹೊತ್ತು ಅದಕ್ಕೆ ಬೇಕಾದ ಬದುಕಲು ಬೇಕಾದ ಇಷ್ಟವಾದ ವೃತ್ತಿಯನ್ನು ಹಾಯ್ದುಕೊಂಡು ಭರವಸೆಯೊಂದಿಗೆ ಜೀವನ ಕಟ್ಟಿಕೊಳ್ಳಬೇಕು.

ಹೆತ್ತವರ ಕನಸು ಸಾಕಾರಗೊಳಸುವ ಪ್ರಯತ್ನದತ್ತ ವಿದ್ಯಾರ್ಥಿಗಳು ನಿರಂತರ ಶ್ರಮಿಸಬೇಕು. ಆಗ ಡಿಗ್ರಿ ಮುಗಿದ ಮೇಲೆ ಸರ್ಕಾರ ಕೆಲಸವೇ ದೊರೆಯಲಿದೆ ಎಂಬ ಭರವಸೆ ಯಾರಿಗೂ ಇಲ್ಲ. ಆದರೆ ಪದವಿ ನಂತರ ಯಾವದಾದರೂ ಖಾಸಗಿ ಕೆಲಸವಾಗಲಿ, ಸ್ವಂತ ಉದ್ಯೋಗವಾಗಲಿ ಕೈಗೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ನಿಮ್ಮೆ ಹೆಜ್ಜೆ ಇರಬೇಕು. ಆಗ ಬದಕು ಸಾರ್ಥಕವಾಗಲಿದೆ ಎಂದು ಕಿವಿ ಮಾತು ಹೇಳಿದರು.

ಅಲ್ಲದೆ ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ತಿಳಿಸಿದಂತೆ ಮೂಲ ಸೌಲಭ್ಯ ಸೇರಿದಂತೆ ಇತರೆ ಯಾವುದೇ ಕೆಲಸಗಳಿದ್ದರೂ ಪ್ರಾಮಾಣಿಕವಾಗಿ ಅವುಗಳನ್ನು ಕಲ್ಪಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಶಾಸಕರನ್ನು ಕಾಲೇಜು ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಸಿಪಿ ಬೊಮ್ಮನಪಾಡ್, ಕಲಬುರ್ಗಿ ವಿವಿ ಮೌಲ್ಯಮಾಪನ ಕುಲ ಸಚಿವ ಡಾ.ಡಿ.ಎಂ.ಮದ್ರಿ, ಸುರಪುರ ಡಾ.ಅಂಬೇಡ್ಕರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಸಿಂಡಿಕೇಟ್ ಸದಸ್ಯರಾದ ಡಾ. ಉಮಾದೇವಿ.ಎ.ಮಟ್ಟಿ, ಮಾದನ ಹಿಪ್ಪರಗಾ ಪದವಿ ಸಹಾಯಕ ಪ್ರಾಧ್ಯಾಪಕ ಕೈಲಾಸಬಾಬು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೋ.ವಿ.ಎಂ.ಹಿರೆಮಠ ವಹಿಸಿದ್ದರು. ಸ್ಕೌಟ್‍ಗೈಡ್ಸ್‍ನ ಮೀನಾಕ್ಷಿ ರಾಠೋಡ್, ಎನ್ನೆಸ್ಸೆಸ್‍ನ ಡಾ.ರಾಜು ಶಾಮರಾವ್, ರೆಡ್‍ಕ್ರಾಸ್ ನ ಡಾ.ಸಂತೋಷ ಹುಗ್ಗಿ, ಬಸವರಾಜ ಗೋಗಿ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button