ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ- ಪೃಶಸ್ತಿ ಬಾಚಿಕೊಂಡ ಶಹಾಪುರ ತಂಡ
ಯೋಗ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡ ಶಹಾಪುರ ತಂಡ
ಯಾದಗಿರಿ, ಶಹಾಪುರಃ ಇತ್ತೀಚಿಗೆ ಕಲಬುರಗಿಯಲ್ಲಿ ಭೂಮಿಯೋಗ ಫೌಂಡೇಶನ್ ವತಿಯಿಂದ ಜರುಗಿದ ದ್ವಿತೀಯ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ನಗರದ ಜ್ಞಾನಾಮೃತ ಸೇವಾ ಟ್ರಸ್ಟ್ ಅಡಿಯಲ್ಲಿ ಯೋಗ ತರಬೇತಿ ಪಡೆದ ತಂಡವು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದೆ.
ಚಂದ್ರಕಲಾ ಗೂಗಲ್, ಆನಂದ ಜೈನ್, ಅಂಬ್ರೇಶಗೌಡ ಪೊ.ಪಾ, ಕೇಮಾ ಶೆಟ್ಟಿ, ಮಲ್ಲಿಕಾರ್ಜುನ ಆವಂಟಿ, ಶೃತಿ ವಠಾರ, ಜಗದೇವಿ ದೊರೆ, ವಿಜಯಲಕ್ಷ್ಮೀ, ಶೃತಿ ಚಿಲ್ಲಾಳ, ರಾಧಿಕಾ ಅಲಬನೂರ, ವರಲಕ್ಷ್ಮೀ, ನಿಂಗಮ್ಮ ಬಿರದಾರ ಪ್ರಥಮ ಬಹುಮಾನ ಪಡೆದರೆ, ಮಲ್ಲಿಕಾರ್ಜುನ ಉಳ್ಳಿ, ಶರಣಗೌಡ ಪಾಟೀಲ, ಬ್ರಹ್ಮಯ್ಯ, ಶಿವರಾಜ ನಾಯಕ, ಸುಶಾಂತ ಗಿಂಡಿ, ಶರಣಗೌಡ ವಠಾರ, ವಿರುಪಾಕ್ಷಪ್ಪ ಸಿಂಪಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಟ್ರಸ್ಟ್ವತಿಯಿಂದ ಉತ್ತಮ ತರಬೇತಿ ಪಡೆದುಕೊಂಡಿದ್ದ ಯೋಗ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ಟ್ರಸ್ಟ್ನ ಕೀರ್ತಿ ಹೆಚ್ಚಿಸಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಟ್ರಸ್ಟನ ಆಡಳಿತ ಮಂಡಳಿಯ ವತಿಯಿಂದ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.