ಪ್ರಮುಖ ಸುದ್ದಿ
ಹಿಂದೂ ಮಹಾಗಣಪತಿ ಮುಂದೆ ಮಂಡಿಯೂರಿ ಶಿರಬಾಗಿ ನಮಿಸಿದ ಕಾಂಗ್ರೆಸ್ MLC
ಚಿತ್ರದುರ್ಗಃ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಕಾಂಗ್ರೆಸ್ ಶಾಸಕರಿಂದ ಚಾಲನೆ
ಚಿತ್ರದುರ್ಗಃ ನಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಓಂಕಾರ ರೂಪದ ಕರ್ಪೂರ ಆರತಿ ಬೆಳಗಿಸುವ ಮೂಲಕ ಕಾಂಗ್ರೆಸ್ MLC ರಘು ಆಚಾರ್ಯ ಚಾಲನೆ ನೀಡಿ, ಮಹಾಗಣಪತಿಗೆ ಭಕ್ತಿ ಪೂರ್ವಕ ಶಿರಭಾಗಿ ನಮಿಸಿದರು.
ವಿಶ್ವ ಹಿಂದೂಪರಿಷತ್, ಭಜರಂಗದಳ ನೇತೃತ್ವದಲ್ಲಿ ಆಯೋಜನೆಗೊಂಡ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು.
ಓಂಕಾರ ದೀಪ ಬೆಳಗುತ್ತಿದ್ದಂತೆ ಜೈಶ್ರೀರಾಮ್ ಘೋಷಣೆ ಮೊಳಗಿದವು. ಹಿಂದೂಪರ ಸಂಘಟನೆ ಕಾರ್ಯಕರ್ತರು ಸಂಗೀತದ ನಾದಕ್ಕೆ ಕುಣಿದು ಕುಪ್ಪಳಿಸಿದರು.
ಎಲ್ಲಡೆ ಓಂಕಾರ ನಾದ ಕೇಸರಿಮಯ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿ ವರ್ಷದಂತೆ ಈ ಸಲವು ಮಹಾಗಣಪತಿ ಭರ್ಜರಿ ಮೆರವಣಿಗೆ ಜರುಗಿತು. ನಾನಾ ಜಿಲ್ಲೆಗಳಿಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗಿವಹಿಸಿದ್ದರು.