ಅಫೀಮು, ಹೆರಾನ್ ಸರ್ಕಾರದಿಂದಲೇ ಮಾರಾಟ ಸಿಧು ಸಲಹೆಗೆ ಆಕ್ರೋಶ
ಪಂಜಾಬ ಸರ್ಕಾರಕ್ಕೆ ಮುಜುಗರ ತಂದ ಸಚಿವ ಸಿಧು ಸಲಹೆ
ಪಂಜಾಬಃ ಆಡಳಿತದಲ್ಲಿರುವ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಜವಬ್ದಾರಿ ಹೊಂದಿರುವ ನವಜೋತ ಸಿಂಗ್ ಸಿಧು ಅಫೀಮು ಮಾರಾಟವನ್ನು ಸರಕಾರವೇ ಮಾರಾಟ ಮಾಡಬೇಕೆಂದು ಸಲಹೆ ನೀಡುವ ಮೂಲಕ ಅವರದ್ದೆ ಸರಕಾರ ಮುಜಗರಕ್ಕೆ ಈಡಾಗುವಂತೆ ಮಾಡಿದ್ದಾರೆ.
ತಮ್ಮದೇ ಸರ್ಕಾರಕ್ಕೆ ಅಫೀಮು, ಹೆರಾನ್ ನಂತಹ ಡ್ರಗ್ಸ್ ನ್ನು ಸರ್ಕಾರದಿಂದಲೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿಕೆ ನೀಡಿರುವದು ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿದೆ.
ಸಚಿವರಾಗಿದ್ದಕೊಂಡು ಇಂತಹ ಅಸಂಬದ್ಧ ಹೇಳಿಕೆ ನೀಡಿರುವದರಿಂದ ಅಲ್ಲಿನ ಕಾಂಗ್ರೆಸ್ ನಾಯಕರು ಸಿಧುಗೆ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಸಿಧು, ಅಕ್ರಮ ಮಾದಕ ದ್ರವ್ಯ, ವಸ್ತುಗಳು ಮಾರಾಟದಿಂದ ಯುವ ಸಮುದಾಯ ಹಾಳಾಗುತ್ತಿದೆ. ಅದನ್ನು ಅಲ್ಕೋಹಾಲ್ ಮಾರಾಟದಂತೆ ಅಫೀಮು ಮಾರಾಟಕ್ಕೂ ಒಂದು ನಿಯಮ ರೂಪಿಸಿ ಎಂಬುದರ ಕುರಿತು ಚಿಂತಿಸಲು ಸಲಹೆ ನೀಡಿದ್ದೇನೆ ಯಾವುದೇ ಒತ್ತಾಯ ಆಗ್ರಹ ಮಾಡಿರುವದಿಲ್ಲ.
ಚರ್ಚೆ ಚಿಂತನೆಗೆ ಅವಕಾಶ ನೀಡಿದ್ದು, ಪರಿಶೀಲನೆಗೆ ಕೋರಿದ್ದೇನೆ. ಇದರಿಂದ ಯುವ ಸಮುದಾಯ ದಾರಿ ತಪ್ಪುವದನ್ನು ತಡೆಯಲು ಸಾಧ್ಯವೇ ಎಂಬುದರ ಕುರಿತು ಚಿಂತನೆ ಅಗತ್ಯ ವಿದೆ ಎಂಬದನ್ನು ಮನಗಾಣಬೇಕಿದೆ ಎಂದು ಸಮಜಾಯಿಸಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಹೇಳಿಕೆ, ಸಮಜಾಯಿಸಿ ಎಷ್ಟರಮಟ್ಟಿಗೆ ನಿಜ ಸುಳ್ಳು ಎಂಬುದು ಸ್ಪಷ್ಟವಾಗಬೇಕಿದೆ.