ಶಿಥೀಲಾವಸ್ಥೆಯಲ್ಲಿರುವ ಶತಮಾನದ ಸೇತುವೆ…!
ಪುಷ್ಕರ ಆರಂಭಕ್ಕೂ ಮುನ್ನ ದುರಸ್ತಿಗೊಳ್ಳಲಿ..
ಯಾದಗಿರಿ : ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಭೀಮಾನದಿಗೆ ನಿರ್ಮಾಣ ಮಾಡಿದ ಶತಮಾನದ ಸೇತುವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದ ಹಂಚಿನಲ್ಲಿದ್ದೆ. ದೇಶದ ಸ್ವಾತಂತ್ರ್ಯ ಪೂರ್ವ ಹೈದರಬಾದ್ ನಿಜಾಮ ರಾಜರ ಆಡಳಿತದಲ್ಲಿ ಯಾದಗಿರಿ, ವಿಜಾಪೂರ ಸಂಪರ್ಕ ರಸ್ತೆಯ ಮುಖ್ಯ ಸೇತುವೆ ಭೀಮಾ ನದಿಗೆ ಅಡ್ಡಲಾಗಿ ಗುಣಮಟ್ಟದಿಂದ ನಿರ್ಮಾಣ ಮಾಡಿದ ಪರಿಣಾಮ ಸಾರಿಗೆ ಸಂಪರ್ಕ ಅಭಿವೃದ್ಧಿಯಾಯಿತು.
ಈ ಸೇತುವೆ ನಿರ್ಮಾಣವಾಗಿ 127ವರ್ಷ ಕಳೆದಿವೆ ಎಂದು ದಾಖಲೆಯಿಂದ ತಿಳಿದುಬಂದಿದೆ. ಆದರೆ ಇಂದು ಸೇತುವೆ ಕಟ್ಟಡದಲ್ಲಿ ದೊಡ್ಡದಾದ ಗಿಡ ಮರಗಳು ಬೆಳೆದು ನಿಂತಿವೆ. ಇದರಿಂದ ಸೇತುವೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು.
ಸೇತುವೆಯ ಕಲ್ಲುಗಳು ಕೆಳಗೆ ಬೀಳುತ್ತಿವೆ ಇದು ಅಪಾಯದ ಮುನ್ಸೂಚನೆಯಾಗಿದೆ ಸರ್ಕಾರ ಪುನ: ಇಂತಹ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಅಕ್ಟೋಬರ್ 12ರಿಂದ ಭೀಮಾನದಿ ಪುಷ್ಕರ ಆರಂಭವಾಗಲಿದ್ದು, ಇದೇ ಸೇತುವೆ ಮೇಲೆ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಸಂಚಾರ ಮಾಡಿದರೂ ಸೇತುವೆಯ ದುಸ್ತಿತಿ ಗಮನಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ದಿನಾಲೂ ಸಾವಿರಾರೂ ವಾಹನಗಳು ಈ ಸೇತುವೆಯ ಮೇಲೆ ನಿತ್ಯ ಸಂಚಾರ ಮಾಡುತ್ತವೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವ್ಯಾಪ್ತಿಯ ಅಧಿಕಾರಿಗಳು ಸಕಾಲಕ್ಕೆ ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮುನ್ನವೇ ಸೇತುವೆಯಲ್ಲಿ ಬೆಳೆದಿರುವ ಗಿಡ ಮರಗಳನ್ನು ತೆಗೆದು ದುರಸ್ಥಿಗೊಳಿಸಬೇಕು, ಅಲ್ಲದೇ ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಇನ್ನೊಂದು ರಸ್ತೆಯ ಮೇಲೆ ಸಂಚಾರ ಮಾಡಲು ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.