ಮಳೆ-ಗಾಳಿಗೆ ನೆಲಕ್ಕೆ ಉರುಳಿದ ವಿದ್ಯುತ್ ಕಂಬಗಳು
ಯಾವುದೇ ಅನಾಹುತ ಸಂಭವಿಸಿಲ್ಲ-ಜೆಸ್ಕಾಂ
ಯಾದಗಿರಿ, ಶಹಾಪುರಃ ತಾಲೂಕಿನ ಗೋಗಿ ಗ್ರಾಮದ ಹತ್ತಿರ ಶಹಾಪುರ ವಿಜಯಪುರ ರಸ್ತೆ ಬದಿ ಇತ್ತೀಚೆಗೆ ಹಾಕಲಾದ ವಿದ್ಯುತ್ ಕಂಬಗಳು ಬುಧವಾರ ರಾತ್ರಿ ಸುರಿದ ಮಳೆ ಬೀಸಿದ ಗಾಳಿಗೆ ರಸ್ತೆ ಮೇಲೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.
ಈ ಕುರಿತು ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇತ್ತೀಚೆಗೆ ಹೊಸ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆ ಕಾಮಗಾರಿಯ ಗುತ್ತಿಗೆದಾರರು ಬೇರೆ ರಾಜ್ಯದವರಾಗಿದ್ದು, ಕಾಮಗಾರಿ ಮುಂದುವರೆದಿದೆ. ಆದರೆ ಕಂಬಗಳನ್ನು ಹಾಖಿ ಒಂದು ವಾರವಾಗಿಲ್ಲ. ಬುಧವಾರ ರಾತ್ರಿ ಮಳೆ ಸುರಿದ ಪರಿಣಾಮ ಮತ್ತು ರಬಸದಿ ಬೀಸಿದ ಗಾಳಿಗೆ ಕಂಬಗಳು ನೆಲಕ್ಕೆ ಉರುಳಿವೆ ಎಂದು ಗೋಗಿ ವ್ಯಾಪ್ತಿಯ ಜೆಸ್ಕಾಂ ಅಧಿಕಾರಿ ಶಕೀಲ್ ಪತ್ರಿಕೆ ತಿಳಿಸಿದ್ದಾರೆ.
ವಿದ್ಯುತ್ ಕಂಬಗಳು ಸಾಲು ಸಾಲಾಗಿ ರಸ್ತೆ ಆವರಿಸಿಕೊಂಡು ಬಿದ್ದಿರವದನ್ನು ಕಂಡ ಸಾರ್ವಜನಿಕರು ಆತಂಕದಿಂದ ಸಂಚರಿಸುವಂತಾಗಿದೆ. ವಾಹನ ಸವಾರರ ಮೇಲೆ ವಿದ್ಯುತ್ ಕಂಬಗಳು ಬಿದ್ದಿದ್ದರೆ ಜೀವಹಾನಿ ಸಂಭವಿಸುತಿತ್ತು. ಆದರೆ ವಿದ್ಯುತ್ ಕಂಬಗಳ ಅವಘಟ ರಾತ್ರಿ ಸಂಭವಿಸಿದ ಕಾರಣ ರಸ್ತೆ ಮೇಲೆ ವಾಹನ ಸವಾರರ ಭರಾಟೆ ಕಡಿಮೆ ಇತ್ತು.
ರಾತ್ರಿ ಬದಲು ಹಗಲಿನಲ್ಲಿ ಕಂಬಗಳು ನೆಲಕ್ಕೆ ಉರುಳಿದ್ದಲ್ಲಿ ಪ್ರಾಣಹಾನಿಯಂತ ಘಟನೆಗಳು ನಡೆಯುತ್ತಿದ್ದವು.
ಜೆಸ್ಕಾಂ ಅಧಿಕಾರಿಗಳು ಕೂಡಲೇ ವಿದ್ಯುತ್ ಕಂಬ ನೆಡುವಲ್ಲಿ ನಿರ್ಲಕ್ಷ ಸಲ್ಲದು. ಕೂಡಲೇ ಈ ಕುರಿತು ಕ್ರಮಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆದಲ್ಲಿ ಜೆಸ್ಕಾಂ ಅಧಿಕಾರಿಗಳೇ ಜವಬ್ದಾರರು ಎಂದು ನಾಗರಿಕರು ಎಚ್ಚರಿಸಿದ್ದಾರೆ.