ಯಶಸ್ಸಿನತ್ತ ಅಮ್ಮ ಕ್ಯಾಂಟೀನ್- ನೂರರ ಸಂಭ್ರಮ
ಅಮ್ಮ ಕ್ಯಾಂಟೀನ್ಗೆ ನೂರು ದಿನದ ಸಂಭ್ರಮ
ನೂರು ದಿನದಲ್ಲಿ ಒಂದು ಲಕ್ಷ ಕ್ಕೂ ಅಧಿಕ ಜನರಿಗೆ ಕ್ಯಾಂಟೀನ್ನಿಂದ ಸೇವೆ
ಯಾದಗಿರಿ,ಶಹಾಪುರಃ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೈಲಾದ ಸೇವೆ ಸಲ್ಲಿಸಲು ಈ ಅಮ್ಮ ಕ್ಯಾಂಟೀನ್ ಹುಟ್ಟು ಹಾಕಲಾಯಿತು. ಕಳೆದ ನೂರದಿನಗಳಲ್ಲಿ 1.23.453 ಲಕ್ಷ ಜನರು ಕ್ಯಾಂಟೀನ್ ನೀಡುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಅಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗುರು ಮಣಿಕಂಠ ತಿಳಿಸಿದರು.
ನಗರದ ಸಿಬಿ ಕಮಾನ್ ಹತ್ತಿರ ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ಬದಿಯಲ್ಲಿ ನಿರ್ಮಾಣಗೊಂಡ ಅಮ್ಮ ಕ್ಯಾಂಟೀನ್ನ ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಮ್ಮ ಕ್ಯಾಂಟೀನ್ ಯಾವುದೇ ಸರ್ಕಾರಿ ಸೌಲಭ್ಯ ಪಡೆಯದೆ ಟ್ರಸ್ಟ್ನ ಸಹಭಾಗಿತ್ವದಲ್ಲಿ ಸ್ನೇಹಿತರೊಂದಿಗೆ ಸೇವಾ ಮನೋಭಾವದೊಂದಿಗೆ ಕ್ಯಾಂಟೀನ್ ನಡೆಸಲಾಗುತ್ತಿದೆ. ಹಸಿದವರಿಗೆ ಒಂದಿಷ್ಟು ಅನ್ನ ನೊಂದವರಿಗೆ ಒಂದಿಷ್ಟು ಸಾಂತ್ವನದ ಮಾತುಗಳು ಅವರನ್ನು ಮತ್ತೇ ಬದಕಲು ಪ್ರೇರಿಪಿಸುವ ಶಕ್ತಿ ತುಂಬಲಿವೆ. ಆ ನಿಟ್ಟಿನಲ್ಲಿ ಟ್ರಸ್ಟ್ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ.
ಇಂತಹ ಮಹತ್ಕಾರ್ಯ ಮಾಡಲು ನಗರದ ಮಹಿಳೆಯರು, ನಾಗರಿಕರು ಸ್ನೇಹಿತರ ಸಹಾಯ ಸಹಕಾರ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರವ ಹಿನ್ನೆಲೆ ನಮಗೆ ಇನ್ನಷ್ಟು ಆನೆಬಲ ಬಂದಿದ್ದು, ಸಂಪೂರ್ಣ ಸೇವೆಯಲ್ಲಿ ಯುವ ಬಳಗ ತೊಡಗಿಸಿಕೊಂಡಿದ್ದು, ನಿತ್ಯ ಸಾವಿರದಿಂದ ಹದಿನೈದು ನೂರರವರೆಗೆ ಜನ ಇಲ್ಲಿ ಊಟ ಮಾಡುತ್ತಿದ್ದಾರೆ. ಇದು ನಮಗೆಲ್ಲ ಬಹು ಸಂತೃಪ್ತಿ ತಂದಿದೆ ಎಂದರು.
ಉಪನ್ಯಾಸಕಿ ಹಣಮಂತಿ ಗುತ್ತೇದಾರ ಮಾತನಾಡಿ, ನಗರದಲ್ಲಿ ಸರ್ಕಾರಿ ಅಮ್ಮ ಕ್ಯಾಂಟೀನ್ ಇನ್ನೂ ಸಿದ್ಧತೆಗೊಂಡಿಲ್ಲ, ಕೆಲವಡೆ ಸರ್ಕಾರಿ ಸೌಲಭ್ಯ ಪಡೆದುಕೊಂಡಿದ್ದರು ಸಮರ್ಪಕವಾಗಿ ಕ್ಯಾಂಟೀನ್ ನಡೆಸಲಾಗುತ್ತಿಲ್ಲ. ಅಲ್ಲದೆ ಗುಣಮಟ್ಟವನ್ನು ಕಳೆದುಕೊಂಡಿವೆ.
ಆದರೆ, ಇಲ್ಲಿನ ಅಮ್ಮ ಚಾರಿಟೇಬಲ್ ಟ್ರಸ್ಟ್ ಗೆಳೆಯರ ಬಳಗ ತಮ್ಮ ವಯಕ್ತಿಕ ಖರ್ಚಿನಲ್ಲಿ ಅಮ್ಮ ಕ್ಯಾಂಟೀನ್ ನಿರ್ಮಿಸಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ನಾಗಿಕರಿಗೆ ಮಾದರಿ ಕ್ಯಾಂಟೀನ್ಯಾಗಿ ಹೊರಹೊಮ್ಮಿದೆ. ಟ್ರಸ್ಟ್ ಕಾರ್ಯ ಶ್ಲಾಘನೀಯವಾದದು. ಕೂಲಿ ಕಾರ್ಮಿಕರಿಗೆ, ಹಳ್ಳಿಯಿಂದ ಅಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಅನುಕೂಲವಾಗಿದೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷೆ ರೇಣುಕಾ ಚಟ್ರಿಕಿ ಮಾತನಾಡಿದರು. ಭಾರತಿ ದರ್ಶನಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಮಲಾ ಕಲಬುರ್ಗಿ, ನಿರ್ಮಲ ಉಪ್ಪಿನ್, ಶೋಭಾ ಆನೇಗುಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ರಾಜೂ ಆನೇಗುಂದಿ, ಅರವಿಂದ ಉಪ್ಪಿನ್, ಅವಿನಾಶ ಗುತ್ತೇದಾರ, ಬಸವರಾಜ ಯಶ್, ಸಿದ್ದು ಆನೇಗುಂದಿ, ಸದಾಶಿವ ಮುದೋಳ, ಸಂಗಮೇಶ ಹುಗ್ಗಿ ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಹೇಶ ಪತ್ತಾರ ನಿರೂಪಿಸಿದರು. ಮಲ್ಲಯ್ಯ ಇಟಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಆಲೂರ ವಂದಿಸಿದರು. ಇದೇ ಸಂದರ್ಭದಲ್ಲಿ ಅಮ್ಮ ಕ್ಯಾಂಟೀನ್ ನೂರದಿನಗಳ ಸಂಭ್ರಮ ಅಂಗವಾಗಿ ಈ ದಿನ ಉಚಿತವಾಗಿ ಪ್ರಸಾದ ಸೇವೆ ಒದಗಿಸಲಾಗಿತ್ತು.