ಪ್ರಮುಖ ಸುದ್ದಿ

ಸಂಚಾರಕ್ಕೆ ಸಂಚಕಾರ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಮನವಿ

ವಿದ್ಯುತ್ ಕಂಬ ಸ್ಥಳಾಂತರಕ್ಕೆ ತಾ.ಹೋ. ಸಮಿತಿ ಡಿಸಿಗೆ ಮನವಿ

ಯಾದಗಿರಿ, ಶಹಾಪುರಃ ನಗರದ ಹೆದ್ದಾರಿ ಬದಿ ಬರುವ ಹಲವಾರು ವಿದ್ಯುತ್ ಕಂಬಗಳು ರಸ್ತೆ ಭಾಗ ಆವರಿಸಿಕೊಂಡಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಈ ಕೂಡಲೇ ಅವುಗಳನ್ನು ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಾಲೂಕಾ ನಾಗರಿಕ ಹೋರಾಟ ಸಮಿತಿ ನಗರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಮುಖಂಡ ಗುರು ಕಾಮಾ, ನಗರದ ಹೆದ್ದಾರಿ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ರಸ್ತೆಯನ್ನು ಆವರಿಸಿಕೊಂಡಿವೆ. ಶಾಲಾ ವಾಹನಗಳು ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ  ಅಡೆತಡೆಯಾಗಿದ್ದು, ಅವಘಡ ಸಂಭವಿಸುವ ಲಕ್ಷಣಗಳಿವೆ. ಹಲವು ಬಾರಿ ರಾತ್ರಿ ಸಮಯದಲ್ಲಿ ವಾಹನಗಳು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸಂಗತಿಗಳು ಸಾಕಷ್ಟಿವೆ.

ಆದರೆ ಅದೃಷ್ಟವಶಾತ್ ಯಾವುದೇ ಅವಘಡಗಳು ಸಂಭವಿಸಿಲ್ಲ. ಅಲ್ಲದೆ ಈ ಕುರಿತು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಆವುದೇ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ತಾವೂಗಳು ಯಾವುದೇ ಅನಾಹುತ ಸಂಭವಿಸುವ ಮೊದಲು ಜೆಸ್ಕಾಂ ಅಧಿಕಾರಿಗಳಿಗೆ ಈ ಅವಘಡಕ್ಕೆ ಕಾರಣವಾಗುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕು. ರಸ್ತೆ ಬದಿಯ ಕೊನೆ ಭಾಗದಲ್ಲಿ ತೊಂದರೆ ಹಾಗದಂತೆ ಅಳವಡಿಸಲು ಸೂಚಿಸಬೇಕೆಂದು ಮನವಿ ಮಾಡಿದರು.

ಅಲ್ಲದೆ ಹೆದ್ದಾರಿ ಪಕ್ಕದಲ್ಲಿ ಮೇಲಿಂದ ಮೇಲೆ ಹಲವಾರು ಕೇಬಲ್ ಅಳವಡಿಕೆಗಾಗಿ ತಗ್ಗು ತೋಡಿದ್ದು, ಕಾಮಗಾರಿ ನಂತರ ಅದನ್ನು ಸಮರ್ಪಕವಾಗಿ ಮುಚ್ಚದೆ ಇರುವ ಕಾರಣ ಸಾಕಷ್ಟು ಜನರು ಅಪಘಾತಕ್ಕೆ ಗುರಿಯಾಗಿದ್ದಾರೆ, ಆದರೆ ಪ್ರಾಣಪಾಯ ಸಂಭವಿಸಿರುವದಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದೆ ಹಾಗೇ ಬಿಟ್ಟಿದ್ದಾರೆ. ಕೂಡಲೇ ಅಂತಹ ತಗ್ಗುಗಳನ್ನು ಕೂಡಲೇ ಸಮರ್ಪಕವಾಗಿ ಮುಚ್ಚುವ ಮೂಲಕ ಯಾವುದೇ ರಸ್ತೆ ಅವಘಡ ಸಂಭವಿಸದಂತೆ ಎಚ್ಚರಿಕೆವಹಿಸಲು ಸೂಚಿಸಬೇಕೆಂದು ಕೋರಿದರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಿಳಿಸುವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ತಲಾಕ್ ಚಾಂದ್ ಮತ್ತು ಉಮೇಶ ಬಾಗೇವಾಡಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button