ಪ್ರಮುಖ ಸುದ್ದಿ

ಟಿಪ್ಪು ಯುದ್ಧ ನೀತಿ ನಿಪುಣಃ ಪ್ರಿಯಾಂಕ್ ಖರ್ಗೆ

ಕಲಬುರಗಿಃ ಟಿಪ್ಪು ಸುಲ್ತಾನ್ ಈ ದೇಶಕಂಡ ಮಹಾನ್‌ಯುದ್ದ ನೀತಿ ನಿಪುಣ.‌ ತನ್ನ 14 ನೆಯ ವಯಸ್ಸಿನಲ್ಲಿಯೇ ಯುದ್ದ ಭೂಮಿಗೆ ಧುಮುಕಿದ ಮಹಾನ್ ದೇಶಪ್ರೇಮಿ ಬ್ರಿಟೀಷರ ವಿರುದ್ದ ನಾಲ್ಕು ಯುದ್ದದಲ್ಲಿ ಪಾಲ್ಕೊಂಡ ದೇಶದ ಏಕೈಕ ರಾಜ ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಬಣ್ಣಿಸಿದರು.

ಕಲಬುರಗಿ ಜಿಲ್ಲಾಡಳಿತ, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಏರ್ಪಡಿಸಲಾದ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಟಿಪ್ಪು ಸುಲ್ತಾನ್ ಯುದ್ದ ನೀತಿ ನಿಪುಣನಾಗಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿ ಆತ ಯುದ್ದ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಫ್ರಾನ್ಸ್ ದೇಶದ ಜತೆ ಒಪ್ಪಂದ ಮಾಡಿಕೊಂಡಿದ್ದ.

ನಾಲ್ಕನೆಯ ಆಂಗ್ಲೋ ಮೈಸೂರು ಕದನದಲ್ಲಿ ಟಿಪ್ಪು ಶ್ರೀರಂಗಪಟ್ಟಣದಲ್ಲಿ ವೀರಮರಣವನ್ನಪ್ಪಿದಾಗ ಬ್ರಿಟೀಷರಿಗೆ ಅಂದು ಸುಮಾರು 7000 ತೋಪುಗಳು ಸಿಕ್ಕಿದ್ದವು ಎಂದರೆ ಟಿಪ್ಪು ಅಂದು ಬ್ರಿಟೀಷರ ವಿರುದ್ದದ ಹೋರಾಟಕ್ಕೆ ತಯಾರಿ‌ ಮಾಡಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ.

ನೀರಾವರಿ ಯೋಜನೆ, ಆಣೆಕಟ್ಟು‌ ಕಟ್ಟುವುದರ ಜೊತೆಗೆ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದ. ರೇಷ್ಮೆಗೆ ಉತ್ತೇಜನ ನೀಡಲು ರೇಷ್ಮೆ ಹುಳುಗಳನ್ನು ಮಸ್ಕಟ್ ಹಾಗೂ ಬಂಗಾಳಗಳಿಂದ ತಂದಿದ್ದ. ರೇಷ್ಮೇ ಬೆಳೆ‌ ಮಾರಾಟ ಮಾಡಲು 34 ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ್ದ. ಬೆಂಗಳೂರಿನ‌ ಲಾಲ್ ಬಾಗ್ ನಿರ್ಮಾಣ ಮಾಡಿದ್ದು ಟಿಪ್ಪು ಸುಲ್ತಾನ್. ಆದರೆ, ಇಂದಿನ‌ ಜನರಿಗೆ ಇಂತಹ ಅರಸನ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿಲ್ಲ.

ಟಿಪ್ಪು ಮೈಸೂರು ರಾಜ್ಯದ‌ ಅನುಕೂಲಕ್ಕೆ ಬೇಕಾದಾಗ ಯುದ್ದ ಮಾಡಿದ್ದಾರೆ ಹೊರತು ಧರ್ಮದ‌ ಆಧಾರದಲ್ಲಿ ಅಲ್ಲ. ಟಿಪ್ಪು ವನ್ನು ವಿರೋಧಿಸುವವರು ಇತಿಹಾಸವನ್ನು ಓದಿಕೊಳ್ಳಲ್ಲಿ.

ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಆರೋಪ ಮಾಡುತ್ತಿದ್ದಾರೆ ಆದರೆ ಕಂಚಿ,‌ ಶ್ರಿಂಗೇರಿ ಮಠ‌ ಸೇರಿದಂತೆ ಹಲವಾರು ಮಠಗಳಿಗೆ ಧನ ಸಹಾಯ ಮಾಡಿದ್ದಾರೆ.

ಮರಾಠರು ಶ್ರಿಂಗೇರಿ‌ಮಠದ ಮೇಲೆ‌ ದಾಳಿ ಮಾಡಿದಾಗ ಟಿಪ್ಪು ತನ್ನ ಸೈನ್ಯ ಕಳಿಸಿ ಮರಾಠರನ್ನು ಹಿಮ್ಮೆಟ್ಟಿಸಿ ಮಠವನ್ನು ರಕ್ಷಿಸಿದರು. ಕೇವಲ‌ ಶ್ರಿಂಗೇರಿ ಮಾತ್ರವಲ್ಲದೇ ಮೈಸೂರು ತಾಲುಕಿನ 156 ಮಠಗಳಿಗೆ ಆರ್ಥಿಕ‌ ಸಹಾಯ ಮಾಡಿದ್ದರು.

ಟಿಪ್ಪುವನ್ನು ಸೋಲಿಸಲು ಬ್ರಿಟೀಷರು, ಪ್ರೆಂಚರು, ನೆಪೋಲಿಯನ್ ಬೋನಾಪಾರ್ಟ್, ಡಚ್ಚರು ಸೇರಿದಂತೆ ಇತರೆ ವಿದೇಶಿ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಟಿಪ್ಪು ಸುಲ್ತಾನದ ಹುತಾತ್ಮರಾಗಿದ್ದು ದೇಶದ ಪರವಾಗಿ ಅಥವಾ ಬ್ರಿಟೀಷರ ವಿರುದ್ದ ಹೋರಾಟದಲ್ಲಿಯೇ ಹೊರತು ಒಂದು ಧರ್ಮದ ಪರವಾಗಿ ಅಲ್ಲ.

ಟಿಪ್ಪು‌ ವಿಚಾರದಲ್ಲಿ ಗೊಂದಲ ಎಬ್ಬಿಸುತ್ತಿರುವ ಬಿಜೆಪಿಯವರು ಇತಿಹಾಸ ತಿಳಿದುಕೊಳ್ಳಲು ಇಂಗ್ಲೆಂಡ್ ಗೆ ಬೇಕಾದರೆ ಹೋಗಲಿ ಆದರೆ ಸುಮ್ಮನೆ ಗದ್ದಲವೆಬ್ಬಿಸಿ ಜಯಂತಿಯಲ್ಲಿ ನಮ್ಮ ಹೆಸರು ಬೇಡ ಎನದನುವುದೆಲ್ಲ ಯಾಕೆ? 2012 ರಲ್ಲಿ ರಾಜ್ಯ ಸರಕಾರ ಹೊರತಂದ ಪುಸ್ತಕದಲ್ಲಿ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಮುನ್ನಡಿ ಬರೆದು ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ ಆದರೆ ಈಗ ವಿರೋಧಿಸಿ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ.

ಯಡಿಯೂರಪ್ಪ, ಶೋಭಾ ಅವರು ಟೋಪಿ ಧರಣಿ ಖಡ್ಗ ಕೈಯಲ್ಲಿ ಹಿಡಕೊಂಡು ಫೋಟೋ ತೆಗೆಸಿಕೊಂಡು ಈಗ ಯಾವ ನೈತಿಕತೆ ಮೇಲೆ ವಿರೋಧಿಸುತ್ತಿದ್ದಾರೆ.

ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರನ್ನು ವಿರೋಧಿಸುವ ಆರ್ ಎಸ್ ಎಸ್ ಬಿಜೆಪಿಯ ಯಾವೊಬ್ಬ ನಾಯಕ ಅಂದು ಹೋರಾಟದಲ್ಲಿ ಭಾಗವಹಿಸಿದ್ದರು ಎಂದ ಸಚಿವರು 2012 ರವರೆಗೆ ದೇಶದ ಧ್ವಜವನ್ನೇ ಆರ್ ಎಸ್ ಎಸ್ ಕಚೇರಿಯ ಮೇಲೆ ಹಾರಿಸಿರಲಿಲ್ಲ ಎನ್ನುವುದು ಗಮನಾರ್ಹ.

ಯಾವುದೋ ಸಂದರ್ಭದಲ್ಲಿ ನಡೆದ‌ ಘಟನೆಗಳನ್ನು ಇಂದಿನ‌ ಕಾಲಿನ ಇತಿಹಾಸದೊಂದಿಗೆ ಸಮೀಕರಿಸಿ‌ ವಿರೋಧಿಸುವುದು ಸಲ್ಲದು ಎಂದರು.

Related Articles

Leave a Reply

Your email address will not be published. Required fields are marked *

Back to top button