ಮಗುವಿಗೆ ಹೆತ್ತ ತಾಯಿಯ ಸಂಸ್ಕಾರ ಅತ್ಯಗತ್ಯ-ನಿರ್ಭಯಾನಂದ ಶ್ರೀ
ತಾಯಿ ತುಂಬುವ ಮನೋಬಲ ಹೆಚ್ಚು ಪರಿಣಾಮಕಾರಿ-ನಿರ್ಭಯಾನಂದ ಶ್ರೀ
ಯಾದಗಿರಿ, ಶಹಾಪುರಃ ಭಾರತದಲ್ಲಿ ಜನ್ಮಿಸುವ ಪ್ರತಿ ಮಗುವಿಗೆ ಇಡಿ ಜಗತನ್ನು ಆಳುವ ಸಾಮಥ್ರ್ಯವಿದೆ ಎಂದು ಗದಗಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಖರ ವಾಗ್ಮೀ ಶ್ರೀ ನಿರ್ಭಯಾನಂದ ಸ್ವಾಮೀಜಿ ತಿಳಿಸಿದರು.
ನಗರದ ಬಚಪನ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದ ಅವರು,
ಜಗತ್ತಿನಲ್ಲಿ ಅತ್ಯಂತ ಅದೃಷ್ಠವಂತರು ಭಾರತೀಯರು ಮತ್ತು ಅತ್ಯಂತ ದುರಾದೃಷ್ಟವಂತರು ಸಹ ಇದೇ ಭಾರತೀಯರು ಎಂದರೆ ತಪ್ಪಾಗಲಾರದು. ನಮ್ಮ ದೇಶದ ಹಿಂದಿನ ಜನರು ಮನುಷ್ಯ ಉದ್ಧಾರಕ್ಕೆ ಸಂತೃಪ್ತಿ ಜೀವನಕ್ಕೆ ಬೇಕಾದ ಮಹತ್ತರ ಸಂಗತಿಗಳನ್ನು ಬರೆದಿಟ್ಟಿರುವದು ನಮ್ಮ ದೇಶದ ಹಿರಿಯರು ಮಾತ್ರ. ಅವರಿಂದ ಬಂದ ಬಳುವಳಿ ಅದ್ಭುತ. ಅದು ಪಿತ್ರಾರ್ಜಿತ ಆಸ್ತಿ. ಅದನ್ನು ನಾವು ಓದಿ ತಿಳಿದುಕೊಂಡು ನಡೆಯಬೇಕು. ಆ ಕೆಲಸವಾಗುತ್ತಿಲ್ಲ ಅಷ್ಟೆ. ಹೀಗಾಗಿ ಭಾರತ ಹಿರಿಮೆ ದೊಡ್ಡದು. ಹಿಂದಿನ ನಮ್ಮ ತಲೆಮಾರಿನವರು ನೀಡಿದ ಬಳುವಳಿ ಬೇಆರವ ದೇಶದಲ್ಲೂ ಇಲ್ಲ.
ಭಾರತದಲ್ಲಿ ಬಾಲ್ಯ ಅವಸ್ಥೆ, ಕುಟುಂಬ ಹೇಗಿರಬೇಕು. ಗಂಡ ಹೆಂಡತಿಯ ಜೀವನ ಮತ್ತು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ನಮ್ಮ ಭಾರತೀಯ ಸಂಸ್ಕಾರದಲ್ಲಿ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದರೆ ಯಾರೊಬ್ಬರು ನಮ್ಮ ಗ್ರಂಥ, ಪುಸ್ತಕಗಳನ್ನು ಓದುವದಿಲ್ಲ.
ಭಾರತದಲ್ಲಿ ಜನ್ಮಸಿದವರೆಲ್ಲ ಅದೃಷ್ಟವಂತರು ಎಂದು ಭಾರತದಲ್ಲಿ ಜನ್ಮಿಸಬೇಕೆಂದು ಆಸೆ ಪಡುತ್ತಿದ್ದರೆ. ಭಾರತೀಯರು ಭಾರತದಲ್ಲಿ ಏನು ಇಲ್ಲ ಅನಿಷ್ಠ ಪದ್ಧತಿ ದೇಶದ ಸಂಸ್ಕøತಿಯನ್ನು ಅಲ್ಲಗಳೆದು ಸ್ವತಃ ಅವನತಿ ಹೊಂದುತ್ತಿದ್ದಾರೆ ಎಂತಹ ವಿಪರ್ಯಾಸ ಅಲ್ಲವೇ. ಇದೆಲ್ಲವೂ ಸತ್ಯ ಸಂಗತಿ ವಾಸ್ತವಿಕ ಸ್ಥಿತಿ ಸರ್ವರೂ ಅರ್ಥೈಸಿಕೊಳ್ಳಬೇಕು.
ಐದು ಸಾವಿರ ವರ್ಷಗಳ ಕಾಲು ಸಂಶೋಧನೆ ಮಾಡಿ ಮನುಷ್ಯ ಉದ್ಧಾರಕ್ಕೆ ಏನು ಬೇಕು ಎಂಬುದನ್ನು ಹಿಂದೆ ಭಾರತೀಯರು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಅದನ್ನು ಓದದ ನಾವುಗಳು ಅಸಡ್ಡೆ ತೋರುತ್ತಾ ವಿದೇಶಿಯ ವ್ಯಾಮೋಹಕ್ಕೆ ಒಳಗಾಗಿ ಹಾಳಾಗುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.
13 ರಾಷ್ಟ್ರಗಳನ್ನು ಸುತ್ತಿದ್ದ ನನಗೆ ಅಮೇರಿಕಾ, ಫ್ರೆಂಚ್ ಇತರೆ ದೇಶಗಳಲ್ಲಿ ಭಾರತದಲ್ಲಿ ನಾವು ಜನ್ಮಿಸಬೇಕು ಗುರುಜೀ ಏನು ಮಾಡಬೇಕೆಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದನ್ನು ನಾವುಗಳು ಮೊದಲು ಅರಿತುಕೊಳ್ಳಬೇಕು.
ಈ ಸಂದರ್ಭದಲ್ಲಿ ಬಚಪನ್ ಶಾಲೆ ಅಧ್ಯಕ್ಷ ಸದಾಶಿವಯ್ಯ ಆದೋನಿ ದಂಪತಿಗಳಿಂದ ಶ್ರೀಗಳನ್ನು ಸನ್ಮಾನಿಸಲಾಯಿತು. ಮಹೇಶ್ವರಾನಂದ ಸ್ವಾಮೀ, ಸರ್ವೋದಯಾನಂದ ಸ್ವಾಮೀ, ದಕ್ಷಿಣೇಶ್ವರಾನಂದ ಸ್ವಾಮೀ ಉಪಸ್ಥಿತರಿದ್ದರು. ಶಿಕ್ಷಕಿ ಸುಂದರಮ್ಮ ನಿರೂಪಿಸಿ ಸ್ವಾಗತಿಸಿದರು. ಶಾಲೆಯ ನಿರ್ದೆಶಕ ಶಿವಕುಮಾರ ಆದೋನಿ ವಂದಿಸಿದರು.
ಗರ್ಭಾವಸ್ಥೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಿ
ತಾಯಿ ತಾನು ಹೆತ್ತ ಮಗುವಿಗೆ ಗರ್ಭಾವಸ್ಥೆಯಲ್ಲೇ ಉತ್ತಮ ಸಂಸ್ಕಾರಗಳು ನೀಡಿದಲ್ಲಿ ಆ ಮಗು ಅತ್ಯುತ್ತಮ ಸಾಧಕನಾಗುತ್ತಾನೆ. ಭೂಮಿಯ ಮೇಲೆ ಜನಿಸುವ ಪ್ರತಿಯೊಂದು ಮಗುವಿಗೂ ತಾಯಿಯ ಶಿಕ್ಷಣ ಹಾರೈಕೆ ಅವಶ್ಯಕವಾಗಿವೆ ಎಂದು ನಿರ್ಭಯಾನಂದ ಶ್ರೀಗಳು ತಾಯಂದಿರಿಗೆ ಸುಧೀರ್ಘವಾಗಿ ತಿಳಿಸಿಕೊಟ್ಟರು.
ಭಾರತದಲ್ಲಿ 9 ತಿಂಗಳು ಮಗುವನ್ನು ಹೊತ್ತ ತಾಯಿ ಗರ್ಭಾವಸ್ಥೆಯಲ್ಲಿ ಏನು ಮಾಡುತ್ತಾಳೆ ಭಾರತೀಯ ಸಂಸ್ಕಾರ ಏನಿದೆ ಎಂಬುದನ್ನು ಸ್ವಾಮಿ ವಿವೇಕಾನಂದರು ಅತ್ಯದ್ಭುತವಾಗಿ ತಿಳಿಸಿದ್ದಾರೆ.
ಭಾರತೀಯ ಸಂಸ್ಕøತಿ ಎಷ್ಟು ಮಹತ್ತರ ಎಂಬುದು ಗೊತ್ತಿರದ ಕಾರಣ ನಾವೆಲ್ಲ ದುರಂತಕ್ಕೆ ಈಡಾಗುತ್ತಿದ್ದೇವೆ. ಹಿಂದಿನ ತಲೆ ಮಾರಿನವರು ನೀಡಿದ ಕೊಡುಗೆಯನ್ನು ಉದ್ಧಾರ ಮಾರ್ಗವನ್ನು ಅನುಸರಿಸಬೇಕಿದೆ. ಸಜ್ಜನರು ಸದಾಚಾರಿಗಳ ಮಾತುಗಳನ್ನು ಕೇಳಬೇಕಿದೆ. ಪೂರ್ವಗೃಹ ಪೀಡಿತರಾಗಿ ಯೋಚಿಸಬೇಡಿ.
ಮನುಷ್ಯ ಮನುಷ್ಯರ ನಡುವೆ ದೇಶ ದೇಶಗಳ ನಡುವೆ ಸಾವಿರಾರು ಕಾರಣಗಳಿವೆ ಅವೆಲ್ಲ ನಾನು ಒಪ್ಪುವದಿಲ್ಲ. ವ್ಯತ್ಯಾಸ ಸಹಜ. ಆದರೆ ಅಲ್ಲಿನ ಸಂಸ್ಕøತಿ ಸಮೃದ್ಧಿಗೂ ನಮ್ಮ ದೇಶದ ಸಂಸ್ಕøತಿ ಜನರಿಗೂ ಇರುವ ವ್ಯತ್ಯಾಸ ಸಾಕಷ್ಟಿದೆ. ನಮ್ಮದು ಉತ್ತಮ ಸಂಸ್ಕಾರ ಹೊಂದಿದ ದೇಶ. ಅದನ್ನು ಅನುಸರಿಸಿದರೆ ಉನ್ನತ ಮಟ್ಟ ತಲುಪಬಹುದು ಎಂದರು.
ಮುಸ್ಲಿಂ ಸಮುದಾಯದಲ್ಲೂ 320 ಜಾತಿ ಪಂಗಡಗಳಿವೆ. ಹಿಂದೂ ಧರ್ಮದಲ್ಲಿ ಸಾಕಷ್ಟು ಪಂಗಡಗಳಿವೆ. ಒಗ್ಗಟ್ಟಾಗದೆ ಕುಲಗೆಡುತ್ತಿದೆ. ಬೌದ್ಧ ಧರ್ಮದಲ್ಲೀ 80 ವಿವಿಧ ಪಂಗಡಗಳಾಗಿ ಒಡೆದು ಹೋಗಿದೆ. ಕ್ರೈಸ್ಥ್ ಸಮುದಾಯದಲ್ಲೂ ನೂರಾರು ಪಂಗಡಗಳಿವೆ. ಆದರೆ ಹಿಂದೂ ಧರ್ಮದ ಬಗ್ಗೆ ನಮ್ಮವರೇ ಚಿಂತಕರೆಂದು ಕರೆಸಿಕೊಳ್ಳುವವರು ಹೇಳುವ ಸುಳ್ಳು ಪೊಳ್ಳು ಮಾತಿಗೆ ಬೆಲೆ ಕೊಟ್ಟು ಸಂಸ್ಕøತಿ ಸಂಸ್ಕಾರ ಹಾಳಾಗುತ್ತಿದೆ. ಎಲ್ಲವೂ ಪರೀಕ್ಷಿಸಿ ನಾ ಹೇಳಿದ್ದೇನೆ ಎಂದು ನಂಬಬೇಡಿ ಇದನ್ನು ಪರೀಕ್ಷಿಸಿ ನೋಡಿ ಎಂದು ತಿಳಿಸಿದರು.
ಇತಿಹಾಸ ತಿರುಚಿ ಸುಳ್ಳು ಕಥೆಗಳನ್ನು ಬರೆದು ಓರ್ವ ಮಹಾತ್ಮನನ್ನು ದೊಡ್ಡವನನ್ನಾಗಿಸುವ ಕೃತ್ಯ ನಡೆದಿದೆ. ಅದು ಅಗತ್ಯವಿಲ್ಲ. ಸತ್ಯ ಘಟನೆಗಳನ್ನು ಕಂಡುಕೊಂಡಲ್ಲಿ ಸಾಕು. ಸ್ವಾಮೀ ವಿವೇಕನಂದರ ಬಗ್ಗೆ ಪಠ್ಯದಲ್ಲಿ ಪತ್ರಿಕೆಯಲ್ಲಿ ಸಾಕಷ್ಟು ಸುಳ್ಳು ವರದಿಗಳನ್ನು ಬರೆದಿದ್ದಾರೆ. ಅವೆಲ್ಲ ಬೇಕಾಗಿಲ್ಲ. ಓರ್ವ ಮಹಾತ್ಮನ ಚರಿತ್ರೆಯ ನಿಜ ಘಟನೆಗಳನ್ನು ಅರಿತುಕೊಂಡರೆ ಸಾಕು ಅದ್ಭುತ ಜೀವನ ಕಂಡುಕೊಳ್ಳಬಹುದು ಎಂದರು.