ಪ್ರಮುಖ ಸುದ್ದಿ
ಹೇಳೋದು ಆಚಾರ ತಿನ್ನೋದು ಬದನೆಕಾಯಿ- K S ಈಶ್ವರಪ್ಪ
ಹೇಳೋದು ಆಚಾರ ತಿನ್ನೋದು ಬದನೆಕಾಯಿ- K S ಈಶ್ವರಪ್ಪ
ಚಿತ್ರದುರ್ಗಃ ಬಿಜೆಪಿ ಪಕ್ಷಕ್ಕೆ ಯಾರಾದರೂ ಬರಬಹುದು. ಎಲ್ಲರಿಗೂ ಸ್ವಾಗತವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಹಲವಾರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೇನ್ ಸನ್ಯಾಸಗಳಾ ಪಕ್ಷಕ್ಕೆ ಬರುವವರನ್ನು ಬೇಡ ಎನ್ನಲು.
ನಾವು ಆಪರೇಷನ್ ಕಮಲ ಮಾಡಲ್ಲ. ಅವರಾಗಿ ಪಕ್ಷಕ್ಕೆ ಬಂದ್ರೆ ಬೇಡ ಎನ್ನಲ್ಲ. ಕಳೆದ ಆರು ತಿಂಗಳಿಂದ ಪ್ರಸ್ತುತ ಸರ್ಕಾರ ಇದ್ರೂ ಇಲ್ಲದಂತಿದೆ.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತಮ್ಮ ಪಕ್ಷಕ್ಕೆ ಕರೆ ತರುವದು ಆಪರೇಷನ್ ಅಲ್ವೆ..ಅವರು ಮಾಡಿದರೆ ಆಪರೇಷನ್ ಅಲ್ಲ ನಾವು ಮಾಡಿದರೆ ಆಪರೇಷನ್ ಕಮಲಎನ್ನುವುದು.
ಹೇಳುವದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.