ಸುಳ್ಳು ಸುದ್ದಿಯಿಂದ ಹೈರಾಣಾದ ರೈತರು ಮತ್ತು ಬ್ಯಾಂಕ್ ಸಿಬ್ಬಂದಿ
ಬೆಳೆ ಸಾಲ ದಾಖಲೆ ಸಲ್ಲಿಸಲು ಪರದಾಟ
ದಾಖಲೆ ಸಲ್ಲಿಕೆಗೆ ಅಂತಿಮ ದಿನವೆಂದು ಸುಳ್ಳು ಸುದ್ದಿ– ಬ್ಯಾಂಕ್ ಮುಂದೆ ನೂಕು ನುಗ್ಗಲು
ಯಾದಗಿರಿ, ಶಹಾಪುರಃ ಬೆಳೆ ಸಾಲ ಮನ್ನಾ ಆಗಿರುವದರಿಂದ ಸರ್ಕಾರದಿಂದ ಅನುದಾನ ಬಂದಿದ್ದು, ರೈತರು ತಮ್ಮ ಜಮೀನಿನ ದಾಖಲೆ ಸಲ್ಲಿಸಲು ಅಂತಿಮ ದಿನವಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ ಹಿನ್ನೆಲೆ ತಾಲೂಕಿನ ಸಗರ ಗ್ರಾಮದ ಎಸ್‍ಬಿಐ ಬ್ಯಾಂಕ್ ಮುಂದೆ ರೈತರು ಜಮಾವಣೆಗೊಂಡಿದ್ದು, ದಾಖಲೆ ಸಲ್ಲಿಸಲು ಪರದಾಡಿದ ಘಟನೆ ಜರುಗಿದೆ.
ಕನಿಷ್ಟ ರೈತರ 25 ಸಾವಿರ ರೂ. ಸಾಲ ಮನ್ನಾವಾಗಲಿದ್ದು, ಅಲ್ಲದೆ ಕಟ್ ಬಾಕಿ ಮತ್ತು ಅವಧಿ ಸಾಲಗಳ ಗರಿಷ್ಠ ಅಂದರೆ 1 ಲಕ್ಷ 50 ರೂ.ವರೆಗಿನ ಸಾಲವು ಸಹ ಮನ್ನಾ ಆಗಲಿದೆ. ಮತ್ತು ನೂತನವಾಗಿ ಹೊಸ ಸಾಲವು ರೈತರಿಗೆ ದೊರೆಯಲಿದೆ ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರೂ ರೈತರು ಕಿವಿಗೊಡದೆ ನೂಕು ನುಗ್ಗಲು ನಡೆಸಿದರು.
ಹೀಗಾಗಿ ಇಲ್ಲಿನ ಬ್ಯಾಂಕ್ ಸಿಬ್ಬಂದಿ ಪರಿತಪಿಸುವಂತಾಯಿತು. ನಿತ್ಯ ಸಮಯದನುಸಾರ ಅಂದಾಜು 300 ರಿಂದ 400 ಜನ ರೈತರ ದಾಖಲೆಗಳನ್ನು ಪಡೆಯಲಾಗುತ್ತಿದೆ. ಆದಾಗ್ಯು ರೈತರು ಬ್ಯಾಂಕ್ ಮುಂದೆ ಜಮಾವಣೆಗೊಂಡಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು.
ಸಾಲ ಮನ್ನಾ ಅನ್ವಯ ಸಲ್ಲಿಸ ಬೇಕಾದ ದಾಖಲೆ ಸಲ್ಲಿಕೆಗೆ ಯಾವುದೇ ಅಂತಿಮ ದಿನ ಪ್ರಕಟಿಸಿಲ್ಲ, ಸುಳ್ಳು ಸುದ್ದಿ ಹರಡಿಸಲಾಗಿದೆ. ರೈತರು ಸಮಾಧಾನವಾಗಿ ಯಾವಾಗಲಾದರೂ ಬ್ಯಾಂಕ್‍ಗೆ ಬಂದು ದಾಖಲೆ ಸಲ್ಲಿಸಬಹುದು.
ಯಾರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅಂತಿಮ ದಿನ ಪ್ರಕಟಿಸಿಲ್ಲ.
ಸಾಮಾನ್ಯವಾಗಿ ಎಲ್ಲರ ದಾಖಲೆಗಳನ್ನು ಪಡೆಯಲಾಗುವುದು ಎಂದು ವ್ಯವಸ್ಥಾಪಕ ಸಿಬ್ಬಂದಿ ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಉಂಟಾದ ಗಾಳಿ ಸುದ್ದಿಗೆ ರೈತರು ಕಿವಿಗೊಡಬೇಡಿ ಎಂದು ಬ್ಯಾಂಕ್ ಸಿಬ್ಬಂದಿ ಮನವಿ ಮಾಡಿದ್ದಾರೆ.
ಸುಳ್ಳು ಸುದ್ದಿ ನಂಬಿ ರೈತರು ಕಂಗಾಲು..
ಅಂದಾಜು ಕೃಷಿಕರ 2060 ಖಾತೆಗಳಿದ್ದು, ಎಲ್ಲರ ದಾಖಲೆ ಪಡೆದು ಎಂಟ್ರಿ ಮಾಡಲಾಗುವದು. ಅಲ್ಲದೆ ಸಾಲವು ವಿತರಣೆ ಮಾಡಲಾಗುವದು. ರೈತರ ಅವರವರ ಖಾತೆಗೆ ಸಾಲದ ಮೊತ್ತವು ಜಮಾವಣೆಯಾಗಲಿದೆ. ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ.
-ಚೇತನ್
ಕೃಷಿ ವಿಸ್ತೀರಣಾ ಅಧಿಕಾರಿ. ಎಸ್‍ಬಿಐ ಬ್ಯಾಂಕ್. ಸಗರ.