ಸಭೆಯಲ್ಲಿ ಅಧಿಕಾರಿಗಳಂತೆ ಕುಳಿತಿದ್ದ..ಯಾರೀತ..?
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲಾ ಉಸ್ತುವಾರಿ ಮಿತ್ರ ಹಾಜರ್- ನಾಗರಿಕರಿಂದ ಖಂಡನೆ
ಯಾದಗಿರಿಃ ನಗರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರ ಆತ್ಮೀಯ ಸ್ನೇಹಿತ ಅಶೋಕ ಪಾಟೀಲ್ ಎಂಬುವರು ಸಭೆಯಲ್ಲಿ ಶಾಸಕ ರಾಜೂಗೌಡರ ಸ್ಥಾನದಲ್ಲಿ ಅಧಿಕಾರಿಗಳೆಂಬಂತೆ ಕುಳಿತಿರುವ ಘಟನೆ ಜರುಗಿದೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಆಯಾ ಇಲಾಖೆಯ ಅಧಿಕಾರಿಗಳು ಹಾಜರಿರಬೇಕೆಂಬುದು ನಿಯಮ. ಆದರೆ ಇಲ್ಲಿ ಸಚಿವರ ಜೊತೆ ಅವರ ಸ್ನೇಹಿತ ಅಶೋಕ ಪಾಟೀಲ್ ಸಹ ಸಭೆಯಲ್ಲಿ ಸುರಪುರ ಶಾಸಕರಿಗಾಗಿ ಮೀಸಲಿದ್ದ ಸ್ಥಾನದಲ್ಲಿ ಸಭೆಯ ಮುಗಿಯುವವರೆಗೂ ಹಾಜರಿರುವದು ಸಭೆಗೆ ಲೋಪ ಎಸಗಿದಂತಾಗಿದೆ.
ಈ ಕುರಿತು ಸಚಿವರನ್ನು ಪ್ರಶ್ನಿಸಿದ ಮಾಧ್ಯಮದವರಿಗೆ ಸಮಜಾಯಿಸಿ ನೀಡಿದ ಸಚಿವ ರಾಜಶೇಖರ ಪಾಟೀಲ್, ಜನಪ್ರತಿನಿಧಿ ಮತ್ತು ಅಧಿಕಾರಿಗಳು ಬಿಟ್ಟು ಬೇರೊಬ್ಬರಾರು ಬಂದು ಕುಳಿತುಕೊಳ್ಳುವದು ತರವಲ್ಲ. ನಾನು ಗಮನಿಸಿಲ್ಲ. ಹಾಗೇನಿದ್ದರೇ ತಪ್ಪು ಸರಿಪಡಿಸಿಕೊಳ್ಳುವೆ ಇದನ್ನೇ ದೊಡ್ಡ ವಿಷಯ ಬೇಡ ಎಂದು ಮುಗಳ್ನಕ್ಕರು ಎಂದು ಹೇಳಲಾಗುತ್ತಿದೆ.
ಅಶೋಕ ಪಾಟೀಲ್ ಸಚಿವರ ಆಪ್ತ ಸ್ನೇಹಿತನಾಗಿದ್ದು, ಮೂಲತಃ ಸಚಿವರ ಊರಿನವರಾಗಿದ್ದಾರೆ. ಅಂದ್ರೆ ಹುಮನಾಬಾದ್ ದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ರೀತಿ ಸರ್ಕಾರಿ ಸಭೆಯಲ್ಲಿ ಸ್ನೇಹಿತನನ್ನು ಕುಳಿರಿಸಿಕೊಂಡಿರುವದು ಸಚಿವರ ಘನತೆಗೆ ಶೋಭೆ ತರುವಂತಹದ್ದಲ್ಲ ಎಂದು ನಾಗರಿಕರಿಂದ ಖಂಡನೆ ವ್ಯಕ್ತವಾಗಿದೆ.